ಕೊಚ್ಚಿ: ಪಾಪ್ಯುಲರ್ ಫ್ರಂಟ್ ಭಯೋತ್ಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಹತ್ತು ಮಂದಿ ಆರೋಪಿಗಳ ಜಾಮೀನು ಅರ್ಜಿಯನ್ನು ಕೊಚ್ಚಿಯ ವಿಶೇಷ ಎನ್‍ಐಎ ನ್ಯಾಯಾಲಯ ತಿರಸ್ಕರಿಸಿದೆ.
ಬಂಧಿತ 58 ಆರೋಪಿಗಳ ಪೈಕಿ 10 ಮಂದಿ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಪಾಲಕ್ಕಾಡ್ ಶ್ರೀನಿವಾಸನ್ ಹತ್ಯೆ ಪ್ರಕರಣದ ಸಂಚು ಮತ್ತು ಸಾಕ್ಷ್ಯ ನಾಶದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಜಾಮೀನು ಬಿಡುಗಡೆಯನ್ನು ಎನ್‍ಐಎ ತೀವ್ರವಾಗಿ ವಿರೋಧಿಸಿದೆ. ಪಟ್ಟಾಂಬಿ ಕುಂಞತ್‍ನ ರಾಗಂ ಅಲಿ ಅಲಿಯಾಸ್ ಅಲಿ, ಪಾಲಕ್ಕಾಡ್ ತೊಟ್ಟುವೇಲಂ ಚಂದನಂ ಕುರಿಹಿಲ್‍ನ ಫಯಾಜ್, ಮನ್ನಾಕ್ರ್ಕಾಡ್‍ನ ಸದಾಂ ಹುಸೇನ್, ಒಲವನ್‍ಕೋಟ್‍ನ ಅಶ್ರಫ್, ಪಲ್ಲಿಪುರಂ ಅಕ್ಬರಲಿ, ಮುಂಡೂರು ನಿಶಾದ್, ಪಳ್ಳಿಪುರಂ ಅಕ್ಬರಲಿ, ಮುಂಡೂರು ನಿಶಾದ್, ಪಟ್ಟಾಂಬಿ ರಶೀದ್, ಪಟ್ಟಾಂಬಿ ಸೀತಾಳಿಯ ಅವರ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.
ಆರೋಪಿಗಳ ವಿರುದ್ಧ ಪ್ರಬಲ ಸಾಕ್ಷ್ಯಾಧಾರಗಳಿದ್ದು, ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಗೊಂಡರೆ ತಲೆಮರೆಸಿಕೊಳ್ಳುವ, ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಮತ್ತು ಇದೇ ರೀತಿಯ ಅಪರಾಧಗಳಲ್ಲಿ ತೊಡಗುವ ಸಾಧ್ಯತೆಗಳಿವೆ ಎಂಬ ಎನ್‍ಐಎ ವಾದವನ್ನು ಪರಿಗಣಿಸಿದ ನ್ಯಾಯಾಲಯ, ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ಒಂದು ವರ್ಷಕ್ಕೂ ಹೆಚ್ಚು ಕಾಲ ರಿಮಾಂಡ್‍ನಲ್ಲಿದ್ದರು. ಎನ್‍ಐಎ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಶಾಸ್ತಮಂಗಲಂ ಅಜಿತ್‍ಕುಮಾರ್ ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಶ್ರೀನಾಥ್ ಎಸ್. ಹಾಜರಾಗಿದ್ದರು.