ಕಾಸರಗೋಡು: 'ಕಾಪಾ' ಕಾಯ್ದೆಯನ್ವಯ ಬಂಧಿನಾಗಿ ಜೈಲು ಶೀಕ್ಷೆ ಅನುಭವಿಸಿ ಹೊರಬಂದಿರುವ ಕುಖ್ಯಾತ ಕಳ್ಳ ತೋರಪ್ಪನ್ ಸಂತೋಷ್ ಎಂಬಾತನನ್ನು ಮತ್ತೆ ಮಾರಕಾಯುಧಗಳೊಂದಿಗೆ ಕಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಆಯೋಜಿಸಲಾಗಿದ್ದ ಮೆರವಣಿಗೆಯಲ್ಲಿ ಮುಖಕ್ಕೆ ಮಾಸ್ಕ್ ಹಾಗೂ ತಲೆಯನ್ನು ಟೋಪಿಯಿಂದ ಮುಚ್ಚಿಕೊಂಡು ಮೆರವಣಿಗೆಯಲ್ಲಿ ಸಾಗುವ ಮಧ್ಯೆ ಪೊಲೀಸರು ಸಂಶಯದಿಂದ ಈತನನ್ನು ವಶಕ್ಕೆ ತೆಗೆದು ಈತನ ವಶದಲ್ಲಿದ್ದ ಚೀಲ ತಪಾಸಣೆ ನಡೆಸಿದಾಗ ಮಾರಕಾಯುಧ ಪತ್ತೆಯಗಿದೆ. ಕಾಸರಗೋಡಿಗೆ ಕಳವು ಕೃತ್ಯಕ್ಕಾಗಿ ತೆರಳುತ್ತಿರುವುದಾಗಿ ಪೊಲೀಸರಲ್ಲಿ ತಪ್ಪೊಪ್ಪಿಕೊಂಡಿದ್ದನು. ಕಾಸರಗೋಡು ಪರಪ್ಪದಲ್ಲಿ ಅಂಗಡಿಯೊಂದರಿಂದ ಇತ್ತೀಚೆಗೆ ಕಳವುನಡೆಸುವ ಮಧ್ಯೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯ ಸಂತೋಷ್‍ನದ್ದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.