ಕಾಸರಗೋಡು: ಭಾರತೀಯ ಸಂಸತ್ತಿನಲ್ಲಿ ಅ. 2ರಂದು ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಮಟ್ಟದಲ್ಲಿ ಆಯ್ಕೆ ಪ್ರಕ್ರಿಯೆಗೆ ಅರ್ಜಿ ಆಹ್ವಾನಿಸಲಾಗಿದೆ.
18 ರಿಂದ 29 ವರ್ಷದೊಳಗಿನ ಕಾಸರಗೋಡಿನ ನಿವಾಸಿಗಳು ಸ್ಪರ್ಧಿಸಬಹುದು. ವಿಷಯ ಲಾಲ್ ಬಹದ್ದೂರ್ ಶಾಸ್ತ್ರಿ -ಅವರ ಜೀವನ ಪಾಠಗಳು ಮತ್ತು ಅಮೃತ ಕಾಲದ ಪರಂಪರೆಗಳು(ಲಾಲ್ ಬಹದ್ದೂರ್ ಶಾಸ್ತ್ರಿ-ಹಿಸ್ ಲೈಫ್ ಲೆಸನ್ಸ್ ಆ್ಯಂಡ್ ಲೆಗಸೀಸ್ ಇನ್ ಅಮೃತ್‍ಕಾಲ್)ಎಂಬ ವಿಷಯದಲ್ಲಿ ಹಿಂದಿ ಮತ್ತು ಇಂಗ್ಲಿಷ್‍ನಲ್ಲಿ ಮೂರು ನಿಮಿಷದ ಭಾಷಣದ ವಿಡಿಯೋವನ್ನು ವಾಟ್ಸಾಪ್ ಸಂಖ್ಯೆ 7736426247ಗೆ ಕಳುಹಿಸಬೇಕು. ಅಲ್ಲದೆ ಇದನ್ನು dyc.kasargod@gmail.com ಎಂಬ ಇ-ಮೈಲ್ ವಿಳಾಸಕ್ಕೂ ಕಳುಹಿಸಬಹುದು. ಜಿಲ್ಲೆಯ ಒಬ್ಬರು ವಿಜೇತರು ರಾಜ್ಯ ಮಟ್ಟಕ್ಕೆ ಅರ್ಹತೆ ಪಡೆಯಲಿದ್ದು, ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ವಿಜೇತರು ಕೇರಳವನ್ನು ಪ್ರತಿನಿಧಿಸಿ, ಸಂಸತ್ತಿನಲ್ಲಿ ಭಾಷಣ ಮಾಡಲಿದ್ದಾರೆ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(7736426247, 8136921959)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.