ಉಪ್ಪಳ: ವಿದ್ಯಾ ಗಣಪತಿ ಉತ್ಸವ ಬಾಯಾರು ಪ್ರಶಾಂತಿ ವಿದ್ಯಾ ಕೇಂದ್ರದಲ್ಲಿ ಜರುಗಿತು. ಹರಿದಾಸ ಶಂ.ನಾಡಿಗ ಕುಂಬಳೆ ಧಾರ್ಮಿಕ ಭಾಷಣ ಮಾಡಿ, ಭಕ್ತಿಯಿಂದ ಕೂಡಿದ ಆರಾಧನೆಯಿಂದ ದೇವರು ಸಂಪ್ರೀತನಾಗುತ್ತಾನೆ. ಭಕ್ತಿಯಿಂದ ಕೊಡುವಂತಹ ವಸ್ತುಗಳಿಂದ ಸರ್ವ ದೇವರಿಗೂ ಸಂಪ್ರೀತಿಯುಂಟಾಗುವುದಾಗಿ ತಿಳಿಸಿದರು.
ಟ್ರಸ್ಟಿನ ಉಪಾಧ್ಯಕ್ಷ ಪೆಲತಡ್ಕ ರಾಮಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಮ್ಯಾನೇಜಿಂಗ್ ಟ್ರಸ್ಟಿ ಹಿರಣ್ಯ ಮಹಾಲಿಂಗ ಭಟ್, ಸದಸ್ಯ ಪಯ್ಯರ ಕೋಡಿ ಸದಾಶಿವ್ ಭಟ್, ಪ್ರಾಂಶುಪಾಲ ವಾಮನನ್ ಉಪಸ್ಥಿತರಿದ್ದರು . ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು
ಗವನಿರ್ಂಗ್ ಕೌನ್ಸಿಲ್ ಸದಸ್ಯ ಹಿರಣ್ಯ ಪ್ರಮೋದ್ ಸ್ವಾಗತಿಸಿದರು. ಅದ್ಯಾಪಕ ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಕಟ್ಟದಮನೆ ಗೋಪಾಲಕೃಷ್ಣ ಭಟ್ ವಂದಿಸಿದರು.
ಮಕ್ಕಳಿಗೆ ವಿವಿಧ ಆಟೋಟದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಗಣಪತಿ ಹವನ ಮತ್ತು ಭಜನೆ ನಡೆಯಿತು. ನಂತರ ಗಣೇಶನ ವಿಗ್ರಹವನ್ನು ಭವ್ಯ ಮೆರವಣಿಗೆಯೊಂದಿಗೆ ವಿಸರ್ಜಿಸಲಾಯಿತು.