ಬದಿಯಡ್ಕ: ಟೀಚರ್ಸ್ ಸ್ಪೋಟ್ರ್ಸ್ ಕೌನ್ಸಿಲ್ ಕಾಸರಗೋಡು ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಅಂಡರ್ ಆರ್ಮ್ ಅಧ್ಯಾಪಕರ ಕ್ರಿಕೆಟ್ ಪಂದ್ಯಾಟ ಬದಿಯಡ್ಕದಲ್ಲಿ ನಡೆಯಿತು.
ಪೆರಡಾಲ ಶ್ರೀಉದನೇಶ್ವರ ಕ್ಷೇತ್ರದ ಟ್ರಸ್ಟಿ ಜಗನ್ನಾಥ ರೈ ಪೆರಡಾಲಗುತ್ತು ದೀಪ ಬೆಳಗಿಸಿ ಉದ್ಘಾಟಿಸಿದರು. ನವಜೀವನ ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ನವೀನ್ ಬನಾರಿ, ಕೌನ್ಸಿಲ್ ಅಧ್ಯಕ್ಷ ಸದಾಶಿವ ಮಾಸ್ತರ್, ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ಕೋಶಾಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ, ಉದಯಕುಮಾರ್ ಶೆಟ್ಟಿ, ಸದಸ್ಯರು ಉಪಸ್ಥಿತರಿದ್ದರು.