ಬದಿಯಡ್ಕ: ಪೆರಡಾಲದ ಶ್ರೀ ವರದಾ ಫ್ರೆಂಡ್ಸ್ ನೇತೃತ್ವದಲ್ಲಿ ಎರಡನೇ ವರ್ಷದ ಜನ್ಮಾಷ್ಟಮಿ ವಿವಿಧ ಧಾರ್ಮಿಕ ಸಾಂಸ್ಕøತಿಕ ಆಟೋ ಸ್ಪರ್ಧೆಗಳೊಂದಿಗೆ ವಿಜೃಂಭಣೆಯಿಂದ ಜರಗಿತು. ಪೆರಡಾಲ ಶ್ರೀಉದನೇಶ್ವರ ಕ್ಷೇತ್ರದ ಆಡಳಿತ ಮಂಡಳಿ ಸದಸ್ಯ ಜಗನ್ನಾಥ ರೈ ಪೆರಡಾಲ ಗುತ್ತು ದೀಪ ಬೆಳಗಿಸಿ ಉದ್ಘಾಟಿಸಿದರು.
ಸಮರೋಪ ಸಮಾರಂಭದ ಅಧ್ಯಕ್ಷತೆಯನ್ನು ಕ್ಲಬ್ ನ ಅಧ್ಯಕ್ಷ ಸಂದೀಪ್ ವಹಿಸಿದ್ದರು. ಶ್ರೀ ಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರ ಟಿ.ಕೆ ನಾರಾಯಣ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸ್ಪರ್ಧಾ ವಿಜೇತರಿಗೆ ಬದಿಯಡ್ಕ ಗ್ರಾಮ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ರವಿಕುಮಾರ್ ರೈ ಪೆರಡಾಲಗುತ್ತು, ಶ್ಯಾಮ್ ಪ್ರಸಾದ್ ಮಾನ್ಯ ಬಹುಮಾನ ವಿತರಿಸಿದರು. ತುಳು ಯಕ್ಷಗಾನ ಪ್ರಯೋಗ ಮತ್ತು ಪರಂಪರೆಯಲ್ಲಿ ಡಾಕ್ಟರೇಟ್ ಪದವಿ ಪಡೆದ ಶ್ರೀಶ ಕುಮಾರ್ ಪಂಜಿತ್ತಡ್ಕ ಇವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಶ್ರೀ ಕ್ಷೇತ್ರದ ಸೇವಾ ಸಮಿತಿ ಕಾರ್ಯದರ್ಶಿ ನಿರಂಜನ್ ರೈ ಪೆರಡಾಲ, ಜಯಲತ ಟೀಚರ್, ಶಿವ ಶಕ್ತಿ ಕ್ಲಬ್ ನ ಭಾಸ್ಕರ ಪಂಜಿತ್ತಡ್ಕ, ಉದನೇಶ್ವರ ಭಕ್ತವೃಂದ ಕಾರ್ಯದರ್ಶಿ ರಾಮ ಎಂ, ಪೃಥ್ವಿ ಕ್ಲಬ್ ನ ಕಾರ್ಯದರ್ಶಿ ಅವಿನಾಶ್ ಶಾಂತಿಪಳ್ಳ, ಆಡಳಿತ ಮಂಡಳಿ ಸದಸ್ಯ ಕೃಷ್ಣನ್ ಬದಿಯಡ್ಕ, ಜಗದೀಶ ಪೆರಡಾಲ ಶುಭ ಹಾರೈಸಿದರು. ಕೃತಿಕಾ ಸ್ವಾಗತಿಸಿ, ಅನ್ವಿತ್ ವಂದಿಸಿದರು. ಕಿರಣ್, ಕಾರ್ತಿಕ್, ಪ್ರಜ್ವಲ್ ಸಹಕರಿಸಿದರು.