ನಾಗ್ಪುರ: ಭಾರತದ ಹಲವು ನಗರಗಳಲ್ಲಿ ಮೆಟ್ರೊ ರೈಲಿನ ಸೌಲಭ್ಯ ಆರಂಭವಾಗಿರುವುದು ಜನರಿಗೆ ಆರಾಮದ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ಇತ್ತೀಚೆಗೆ ಮೆಟ್ರೊ ರೈಲಿನಲ್ಲಿ ನಡೆಯುವ ಪ್ರಯಾಣಿಕರ ಜಗಳ, ಸಾಮಾಜಿಕ ಜಾಲತಾಣಗಳಿಗಾಗಿ ವಿಡಿಯೊ ಮಾಡುವುದು ಸಾಮಾನ್ಯ ಎನ್ನುವಂತಾಗಿದೆ.

ಇದೀಗ ನಾಗ್ಪುರ ಮೆಟ್ರೊ ರೈಲಿನಲ್ಲಿ ಯುವಕ ಯುವತಿಯರು ಫ್ಯಾಷನ್ ಶೋ ನಡೆಸಿದ್ದಾರೆ. ತರಹೇವಾರಿ ಉಡುಗೆಗಳನ್ನು ತೊಟ್ಟು ರ‍್ಯಾಂಪ್ ಮಾಡುವ ಮೂಲಕ ಇತರ ಪ್ರಯಾಣಿಕರು ಕಣ್ಣರಳಿಸಿ ನೋಡುವಂತೆ ಮಾಡಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮೆಟ್ರೊ ರೈಲಿನಲ್ಲಿ ನಡೆದ ಫ್ಯಾಷನ್ ಶೋದ ವಿಡಿಯೊ ಹರಿದಾಡುತ್ತಿದೆ. ಇನ್‌ಸ್ಟಾಗ್ರಾಂನಲ್ಲಿ ಬಳಕೆದಾರರೊಬ್ಬರು ಈ ವಿಡಿಯೊವನ್ನು ಶೇರ್ ಮಾಡಿಕೊಂಡಿದ್ದಾರೆ.