ಕಾಸರಗೋಡು: ಜಿಲ್ಲೆಯ ವಿವಿಧ ಪ್ರದೇಶಗಳ ಪ್ರವಾಸೋದ್ಯಮ ಪ್ರೇಮಿಗಳ ಬಳಗವಾದ ಬೇಕಲ್ ಟೂರಿಸಂ ಫ್ರೆಟರ್ನಿಟಿ ವತಿಯಿಂದ ಯುವ ಪ್ರವಾಸೋದ್ಯಮ ಉದ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭ ಕಾಸರಗೋಡಿನ ಸಿಟಿ ಟವರ್ ಸಭಾಂಗಣದಲ್ಲಿ ಜರುಗಿತು.
ಬೇಕಲ ಇಂಟರ್ ನ್ಯಾಷನಲ್ ಹೊಟೇಲ್ ಮಾಲಿಕ ಕ್ಯೂ.ಎಚ್ ಗ್ರೂಪ್ ನಿರ್ದೇಶಕ ಕೆಕೆ ಅಬ್ದುಲ್ ಲತೀಫ್, ಮಹಿಳಾ ಪ್ರವಾಸೋದ್ಯಮ ಉದ್ಯಮಿ ಪ್ರಶಸ್ತಿಯನ್ನು ಬೇಕಲ್ ಪ್ಯಾಲೇಸ್ ಹೊಟೇಲ್‍ನ ಮಾಲಕಿ ಮಲ್ಲಿಕಾ ಗೋಪಾಲನ್ ಮತ್ತು ಹಾಸ್ಪಿಟಾಲಿಟಿ ಎಕ್ಸಲೆನ್ಸ್ ಪ್ರಶಸ್ತಿಯನ್ನು ಟೀಮ್ ವೈಸ್‍ರಾಯ್ ಮತ್ತು ಸಿಟಿ ಟವರ್ ಹೋಟೆಲ್‍ನ ಕಾರ್ಯಾಚರಣೆಯ ಮುಖ್ಯಸ್ಥೆ ಡಾ.ಅರ್ಶನಾ ಅದಾಬಿ ಪಡೆಡುಕೊಂಡರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ವಿ ವೇಣು ಪ್ರಶಸ್ತಿ ಪ್ರದಾನ ಮಾಡಿದರು.
ಇದೇ ಸಂದರ್ಭ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮಾಧ್ಯಮಗಳ ಕೊಡುಗೆ ಪರಿಗಣಿಸಿ ಬಿಟಿಎಫ್ ಒಕ್ಕಕೂಟದ ಮಾಧ್ಯಮ ಪ್ರತಿನಿಧಿಗಳಿಗೆ ಡಾ. ವಏಣು ಸ್ಮರಣಿಕೆ ನೀಡಿ ಗೌರವಿಸಿದರು. ಬಿ.ಆರ್. ಡಿಸಿ ಪ್ರಥಮ ವ್ಯವಸ್ಥಾಪಕ ನಿರ್ದೇಶಕರಾಗಿ ಐದು ವರ್ಷ ಜಿಲ್ಲೆಗೆ ಸೇವೆ ಸಲ್ಲಿಸಿ, ಪ್ರಸಕ್ತ ಬಿ.ಆರ್. ಡಿಸಿ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯಕನಿರ್ವಹಿಸುತ್ತಿರುವ ಡಾ. ವಿ.ವೇಣು ಅವರನ್ನುಬೇಕಲ ಟೂರಿಸಂ ಫ್ರೆಟರ್ನಿಟಿ ವತಿಯಿಂದ ಗೌರವಿಸಲಾಯಿತು.