HEALTH TIPS

ಭಾರತದ ಮೊಟ್ಟ ಮೊದಲ ಯುಪಿಐ ಆಧಾರಿತ ಎಟಿಎಂ ಆರಂಭ; ಕಾರ್ಡ್​ಲೆಸ್​​ ಕ್ಯಾಶ್​ ವಿತ್​​ಡ್ರಾ ಮಾಡುವುದು ಹೀಗೆ

              ಮುಂಬೈ: ಇತ್ತೀಚಿನ ವರ್ಷಗಳಲ್ಲಿ ಯೂನಿಫೈಡ್​ ಪೇಮೆಂಟ್ಸ್​ ಇಂಟರ್​ಫೇಸ್ (UPI)​ ಮೂಲಕ ಸ್ಮಾರ್ಟ್​ಫೋನ್​ಗಳಲ್ಲಿ ಹಣ ವರ್ಗಾವಣೆ ಮಾಡುವುದು ಗೊತ್ತೇ ಇದೆ. ಆದರೆ, ಎಟಿಎಂ ಕಾರ್ಡ್​ ಇಲ್ಲದೇ ಯುಪಿಐ ಮೂಲಕ ಹಣ ಪಡೆಯುವ ಹೊಸ ತಂತ್ರಜ್ಞಾನವೊಂದು ಯಶಸ್ವಿಯಾಗಿ ಪ್ರದರ್ಶನಗೊಂಡಿದೆ.

               ಮುಂಬೈನಲ್ಲಿ ನಡೆಯುತ್ತಿರುವ ಗ್ಲೋಬಲ್​ ಫಿನ್​ಟೆಕ್​ ಫೆಸ್ಟ್​ನಲ್ಲಿ ಯುಪಿಐ ಬಳಸಿ ಹಣ ಪಡೆಯುವ ಪ್ರಯತ್ನ ಎಲ್ಲರ ಗಮನ ಸೆಳೆದಿದ್ದು, ಈ ವಿಡಿಯೋವನ್ನು ಕೇಂದ್ರ ಸಚಿವ ಪ್ರಿಯೂಷ್​ ಗೋಯೆಲ್​ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ.


                  ಇದು ದೇಶದ ಮೊದಲ ಯುಪಿಐ ಎಟಿಎಂ ಎಂದು ಕರೆಯಲಾಗಿದೆ. ಈ ಹೊಸ ತಂತ್ರಜ್ಞಾನದಿಂದ ನಾವು ಎಟಿಎಂ ಕಾರ್ಡ್​ಗಳನ್ನು ತೆಗೆದುಕೊಂಡು ಹೋಗುವ ಅವಶ್ಯಕತೆ ಇರುವುದಿಲ್ಲ. ಇದೊಂದು ಕ್ರಾಂತಿಕಾರಕ ಆವಿಷ್ಕಾರವಾಗಿದೆ ಎಂದು ಸಚಿವ ಪಿಯೂಷ್​ ಗೋಯೆಲ್​ ಬಣ್ಣಿಸಿದ್ದಾರೆ.

                                   ಬಳಕೆ ಹೇಗೆ

              ಜನ್ಮದಿನ ಆಚರಿಸಿಕೊಳ್ಳುವವರಿಗೆ ವಂಡರ್ಲಾದಲ್ಲಿ ಉಚಿತ ಟಿಕೆಟ್​; ಇಲ್ಲಿದೆ ವಿವರ..

ವೈರಲ್​ ಆಗಿರುವ ವಿಡಿಯೊದಲ್ಲಿ ವ್ಯಕ್ತಿಯೊಬ್ಬರು ಯುಪಿಐ ಎಟಿಎಂಅನ್ನು ಹೇಗೆ ಬಳಕೆ ಮಾಡಬೇಕು ಎಂದು ಹೇಳಿಕೊಡುತ್ತಾರೆ. ಮೊದಲಿಗೆ ಕಾರ್ಡ್​ಲೆಸ್​ ಕ್ಯಾಶ್​ ಎಂದು ಆಯ್ಕೆ ಮಾಡಬೇಕು. ಆ ನಂತರ ನಾವು ಬಯಸಿದ ಮೊತ್ತವನ್ನು ಅಲ್ಲಿ ನಮೂದಿಸಬೇಕು. ಬಳಿಕ ಯುಪಿಐ ಆಯಪ್​ ಬಳಸಿ ಸ್ಕ್ರೀನ್​ ಮೇಲೆ ತೋರಿಸಲಾಗುವ ಕ್ಯೂಆರ್​ ಕೋಡ್​ಅನ್ನು ಸ್ಕ್ಯಾನ್​ ಮಾಡಿ ಪಾಸ್​ವರ್ಡ್​ ನಮೂದಿಸಿ ಆ ನಂತರ ಹಣ ಪಡೆಯಬಹುದು ಎಂದು ಹೇಳುತ್ತಿರುವ ವಿಡಿಯೋ ವೈರಲ್​ ಆಗಿದೆ.

                 ಸಾಮಾನ್ಯ ಎಟಿಎಂನಂತೆಯೇ ಯುಪಿಐ ಎಟಿಎಂಅನ್ನು ಬಳಸಬಹುದು. ನಗದು ಪಡೆಯಲು ಇರುವ ಉಚಿತ ಬಳಕೆಯ ಮಿತಿ ನಂತರ ವಿಧಿಸಲಾಗುವ ಶುಲ್ಕಗಳು ಸಹ ಇದಕ್ಕೆ ಅನ್ವಯವಾಗುತ್ತದೆ. ಈ ಯುಪಿಐ ಎಟಿಎಂ ಅನ್ನು ಆಯಪ್​ಗಳಾದ ಗೂಗಲ್ ​ಪೇ, ಪೇಟಿಎಂ, ಪೋನ್ ​ಪೇ ಬಳಸಿ ಹಣ ಪಡೆಯಬಹುದು. ಆದರೆ, ಈ ಹೊಸ ತಂತ್ರಜ್ಞಾನವನ್ನು ಸಾರ್ವಜನಿಕರ ಬಳಕೆಗೆ ಇನ್ನೂ ಮುಕ್ತವಾಗಿಸಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries