ಕಾಸರಗೋಡು: ನಾಡಿನ ಅಭಿವೃದ್ಧಿಯಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದ್ದು, ಪತ್ರಕರ್ತರ ಒಳನೋಟದಿಂದ ಕೂಡಿದ ವರದಿಗಳು ಸರ್ಕಾರದ ಕನ್ತೆರೆಸುವಲ್ಲೂ ಪರಿಣಾಮಕಾರಿಯಾಗಿರುತ್ತದೆ ಎಂದು ಶಾಸಕ ಎನ್.ಎ ನೆಲ್ಲಿಕುನ್ನು ತಿಳಿಸಿದ್ದಾರೆ.
ಅವರು ಕಾಸರಗೋಡು ಪ್ರೆಸ್‍ಕಲ್ಬ್ ವತಿಯಿಂದ ಆಯೋಜಿಸಲಾಗಿದ್ದ ಹಿರಿಯ ಪತ್ರಕರ್ತ, ಕಾಸರಗೋಡು ಪೆಸ್‍ಕ್ಲಬ್ ಹಿರಿಯ ಸದಸ್ಯ ಉಣ್ಣಿಕೃಷ್ಣನ್ ಪುಷ್ಪಗಿರಿ ಅವರ ಒಂದನೇ ಸಂಸ್ಮರಣಾ ಸಮಾರಂಭ ಉದ್ಘಾಟಿಸಿ ಸಂಸ್ಮರಣಾ ಭಾಷಣ ಮಾಡಿದರು.
ಪ್ರೆಸ್‍ಕ್ಲಬ್ ಉಪಾಧ್ಯಕ್ಷ ಮಹಮ್ಮದ್ ನಹಾಸ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾದ ಪುರುಷೋತ್ತಮ ಪೆರ್ಲ, ಅಬ್ದುಲ್ಲಕುಞÂ ಉದುಮ, ಚಂದ್ರಮೋಹನನ್, ವಿನೋದ್‍ಪಾಯಂ. ಅಬ್ದುಲ್ ರಹಮಾನ್ ಆಲೂರ್, ಶಾಫಿ ತೆರುವತ್, ನಸ್ರುಲ್ಲಾ, ಟಿ.ಎ ಶಾಫಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಪದ್ಮೇಶ್ ಕೆ.ವಿ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.