ಪೋಷಕರ ಜವಾಬ್ದಾರಿ ಎಂಬುವುದು ಅಷ್ಟೇನು ಸುಲಭವಲ್ಲ. ಎಲ್ಲರೂ ನಮ್ಮ ಮಕ್ಕಳಿಗೆ ಒಳ್ಳೆಯ ಪೋಷಕರಾಗಬೇಕೆಂದು ಬಯಸುತ್ತಾರೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ನಮ್ಮಿಂದಲೂ ಕೆಲವೂ ತಪ್ಪಾಗುವುದು,ಆದರೆ ನಾವು ಮಾಡುತ್ತಿರುವುದು ತಪ್ಪು ಎಂದು ಗೊತ್ತಾಗುವುದೇ ಇಲ್ಲ. ನೀವು ಹೆಲಿಕಾಪ್ಟರ್ ಪೇರೆಂಟಿಂಗ್ ಬಗ್ಗೆ ಕೇಳಿದ್ದೀರಾ? ಅಂಥ ಪೇರೆಂಟಿಗ್‌ನಲ್ಲಿ ನೀವೂ ಒಬ್ಬರಾಗಿದ್ದೀರಾ? ಹಾಗಾದರೆ ಇದರಿಂದ ನಿಮ್ಮ ಮಕ್ಕಳ ಮೇಲೆ ಉಂಟಾಗುವ ಪ್ರಭಾವಗಳ ಬಗ್ಗೆ ತಿಳಿಯಲೇಬೇಕಾಗಿದೆ.
ಮೊದಲಿಗೆ ಹೆಲಿಕಾಫ್ಟರ್ ಪೇರೆಂಟಿಂಗ್ ಎಂದರೇನು ನೋಡೋಣ ಬನ್ನಿ?
ನಾವು ಮಕ್ಕಳ ಮೇಲೆ ಪ್ರೀತಿ ತೋರಿಸಬೇಕು, ಅವರ ಬೇಕು-ಬೇಡಗಳನ್ನು ನೋಡಿಕೊಳ್ಳಬೇಕು, ಆದರೆ ಓವರ್ ಪ್ರೊಟೆಕ್ಟಿವ್ ಆಗಬಾರದು. ಕೆಲ ಪೋಷಕರಿದ್ದಾರೆ ಮಕ್ಕಳು ಕಾಲೇಜು ತಲುಪಿರುತ್ತಾರೆ, ಆದರೂ ಅವರನ್ನು ಕಾಲೇಜ್‌ಗೆ ಹೋಗಿ ಡ್ರಾಪ್ ಮಾಡಿ ಬರುತ್ತಾರೆ. ಮಕ್ಕಳನ್ನು ಸ್ವತಂತ್ರವಾಗಿ ಏನೂ ಮಾಡಲು ಬಿಡುವುದಿಲ್ಲ. ಅವರಿಗೆ ಏನು ಬೇಕು, ಬೇಡ ಎಂಬುವುದನ್ನು ಇವರೇ ನಿರ್ಧರಿಸುತ್ತಾರೆ. ಆದರೆ ನಾವು ಈ ರೀತಿ ಮಾಡಿದರೆ ಮಕ್ಕಳ ಮೇಲೆ ಬೀರುವ ಪ್ರಭಾವವೇನು ಗೊತ್ತೇ? ಬನ್ನಿ ಆ ಕುರಿತು ನೋಡೋಣ...
ಮಕ್ಕಳಲ್ಲಿ ಆತ್ಮವಿಶ್ವಾಸದ ಕೊರತೆ ಉಂಟಾಗುತ್ತದೆ
ಪೋಷಕರು ಮಕ್ಕಳನ್ನು ಓವರ್ ಪ್ರೊಟೆಕ್ಟಿಂಗ್ ಮಾಡಲಾರಂಭಿಸಿದಾಗ ಮಕ್ಕಳಲ್ಲಿ ಆತ್ಮವಿಶ್ವಾಸ ಕಡಿಮೆಯಾಗುತ್ತಾ ಹೋಗುತ್ತದೆ. ಹೌದು ಎಲ್ಲಾ ವಿಷಯವನ್ನು ಪೋಷಕರೇ ನಿರ್ಧರಿಸಿದರೆ ಅವರಿಗೆ ನನ್ನಿಂದ ಇದು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಮೂಡುತ್ತದೆ. ಪ್ರತಿಯೊಂದು ನಿರ್ಧಾರಕ್ಕೂ ನಿಮ್ಮನ್ನೇ ಅವಲಂಬಿಸುತ್ತಾರೆ. ಕೆಲವೊಂದು ನಿರ್ಧಾರಗಳನ್ನು ಅವರೇ ತೆಗೆಯಲು ಬಿಡಿ. ಕೆಲವೊಂದು ಸವಾಲುಗಳು ಎದುರಿಸಬಹುದು, ಅವರು ಅದನ್ನು ಹೇಗೆ ಎದುರಿಸುತ್ತಾರೆ ಎಂಬುವುದನ್ನು ನೋಡಿ, ತಕ್ಷಣವೇ ಅವರ ಸಹಾಯ ಧಾವಿಸಬೇಡಿ. ಅಷ್ಟು ಅಗ್ಯತಬಿದ್ದಿದೆ ಎಂದಾಗ ಮಾತ್ರ ಸಹಾಯ.
ಎಲ್ಲಾ ವಿಷಯದಲ್ಲೂ ಅವರು ಸುರಕ್ಷಿತವಾಗಿರಬೇಕೆಂದು ಭಾವಿಸಬೇಡಿ
ಮಕ್ಕಳ ಸುರಕ್ಷತೆಗೆ ಏನು ಮಾಡಬೇಕು ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕು, ನಮ್ಮಿಂದ ಸಾಧ್ಯವಾದರೆ ಆಸ್ತಿ ಮಾಡಬೇಕು. ಮಕ್ಕಳ ಭವಿಷ್ಯ ಸುರಕ್ಷಿತವಾಗಿರಬೇಕೆಂದು ನಿಮ್ಮೆಲ್ಲಾ ಆಸೆಗಳನ್ನು ತ್ಯಾಗ ಮಾಡಿ ಆಸ್ತಿ ಮಾಡಬೇಡಿ. ಇನ್ನು ಆಸ್ತಿ ಮಾಡಿದ ಮೇಲೆ ಆಸ್ತಿ ಸುರಕ್ಷಿತವಾಗಿ ಕಾಪಾಡಿಕೊಂಡು ಹೋಗುವುದನ್ನು ಕಲಿಸಿ, ಅದನ್ನು ಕಲಿಯಬೇಕೆಂದರೆ ಕಷ್ಟವೆಂದರೇನು? ಸವಾಲುಗಳನ್ನು ಹೇಗೆ ಎದುರಿಸುವುದು ಎಂಬುವುದನ್ನು ಅವರಿಗೆ ಕಲಿಸಿ. ಅದು ಬಿಟ್ಟು ಎಲ್ಲಾ ರೀತಿಯಲ್ಲಿ ಅವರನ್ನು ಸುರಕ್ಷತೆ ಮಾಡಲು ಹೋಗಬೇಡಿ.
ಅವರ ಬಗ್ಗೆ ತುಂಬಾನೇ ಗಮನ ನೀಡುವುದು
ಅವರು ಏನು ಮಾಡುತ್ತಿದ್ದಾರೆ ಎಂಬುವುದು ನಮಗೆ ಗೊತ್ತಿರಬೇಕು, ಹಾಗಂತ ತುಂಬಾನೇ ಸೂಪರ್‌ವೈಸ್ ಮಾಡಬಾರದು. ಅವರ ಪ್ರತಿಯೊಂದು ಚಲನವಲನಗಳನ್ನು ಗಮನಿಸುವುದು, ಪ್ರತಿಯೊಂದು ವಿಷಯಕ್ಕೂ ನೀವು ನಿಮ್ಮ ಅಭಿಪ್ರಾಯವನ್ನು ಅವರ ಮೇಲೆ ತುರುಕುವುದು ಮಾಡಿದಾಗ ಅವರ ತುಂಬಾನೇ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಅತಿಯಾಗಿ ಗಮನಿಸಿದರೆ ಅವರು ನಿಮಗೆ ಸುಳ್ಳು ಹೇಳಿ ಅಡ್ಡದಾರಿ ಸುಳಿಯುವ ಸಾಧ್ಯತೆ ಹೆಚ್ಚಾಗುವುದು, ಆದ್ದರಿಂದ ಅವರಿಗೆ ಸ್ವಲ್ಪ ಸ್ವಾತಂತ್ರ್ಯ ಕೊಡಿ, ಖಂಡಿತ ಅವರು ದಾರಿ ತಪ್ಪಲ್ಲ.
ಅವರು ನಿರ್ಧಾರ ತೆಗೆದುಕೊಳ್ಳುವ ಸಾಮಾರ್ಥ್ಯ ಕಡಿಮೆ ಮಾಡುವುದು
ಅವರಿಗೆ ಏನು ಕಲಿಯಲು ಇಷ್ಟವಿದೆ ಎಂದು ಕೇಳದೆ ನಾವು ಬಯಸಿದ ಅಥವಾ ನಮ್ಮಿಂದ ಸಾಧ್ಯವಾಗದಿರುವುದು ನಮ್ಮ ಮಗು ಆಗಬೇಕೆಂದು ಬಯಸುವುದು ತಪ್ಪು. ಅವರ ಜೀವನದ ಬಗ್ಗೆ ಅವರೇ ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡಿ, ಏನಾದರೂ ತಪ್ಪಾದರೆ ತಿದ್ದುವ ಕೆಲಸ ಮಾಡಿ. ಆದರೆ ಅವರ ಬದುಕಿನ ಪ್ರತಿಯೊಂದು ನಿರ್ಧಾರವನ್ನು ನೀವೇ ತೆಗೆದುಕೊಳ್ಳಬೇಡಿ, ಹೀಗೆ ಮಾಡುವುದರಿಂದ ಅವರಿಗೆ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ತುಂಬಾನೇ ಕಡಿಮೆಯಾಗುವುದು.
ಪೋಷಕರು ಮಕ್ಕಳ ಸಂಬಂಧ ಹಾಳಾಗುವುದು
ಪೋಷಕರು ಮಕ್ಕಳಿಗೆ ಒಳ್ಳೆಯದು ಮಾಡುತ್ತೇನೆ ಎಂದು ಉಸಿರುಕಟ್ಟುವ ವಾತಾವರಣ ಮಾಡಿದರೆ ಮಕ್ಕಳು ಪೋಷಕರನ್ನು ದ್ವೇಷಿಸಲಾರಂಭಿಸುತ್ತಾರೆ ಮಕ್ಕಳ-ಪೋಷಕರ ನಡುವಿನ ಸಂಬಂಧ ಹಾಳಾಗುವುದು, ಆದ್ದರಿಂದ ಮಕ್ಕಳನ್ನು ತುಂಬಾನೇ ಸಡಿಲ ಬಿಡುವುದು ಹೇಗೆ ಸರಿಯಿಲ್ಲವೂ ಅದರಂತೆ ತುಂಬಾನೇ ಫ್ರೀ ಬಿಡುವುದು ಕೂಡ ಒಳ್ಳೆಯದಲ್ಲ.