ಕಾಸರಗೋಡು: ಅರಣ್ಯ ಮತ್ತು ವನ್ಯಜೀವಿ ಇಲಾಖೆ ವತಿಯಿಂದ ಆಯೋಜಿಸಿರುವ ವನ್ಯಜೀವಿ ವಾರಾಚರಣೆಯ ಅಂಗವಾಗಿ ಅಕ್ಟೋಬರ್ 2ಮತ್ತು 3ರಂದು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಅಕ್ಟೋಬರ್ 2 ರಂದು ಬೆಳಿಗ್ಗೆ 8.30ರಿಂದ ಕಾಸರಗೋಡು Uಸರ್ಕಾರಿ ಕಾಲೇಜಿನಲ್ಲಿ ನೋಂದಣಿ ಪ್ರಾರಂಭವಾಗಲಿದೆ. 9.30 ಯಿಂದ 11.30ರ ವರೆಗೆ ಎಲ್.ಪಿ./ಯು.ಪಿ/ಹೈಸ್ಕೂಲ್/ಕಾಲೇಜು ವಿದ್ಯಾರ್ಥಿಗಳಿಗಾಗಿ ಪೆನ್ಸಿಲ್ ಡ್ರಾಯಿಂಗ್ ಸ್ಪರ್ಧೆಗಳು ಮತ್ತು ಬೆಳಿಗ್ಗೆ 11.45 ರಿಂದ 12.45 ರವರೆಗೆ ಹೈಸ್ಕೂಲ್/ಕಾಲೇಜು ವಿದ್ಯಾರ್ಥಿಗಳಿಗೆ ಮಲಯಾಳಂ, ಕನ್ನಡ ಪ್ರಬಂಧ ಸ್ಪರ್ಧೆಗಳು ನಡೆಯಲಿವೆ. ಮಧ್ಯಾಹ್ನ 2.15 ರಿಂದ 4.15 ರವರೆಗೆ ಎಲ್.ಪಿ ಯಿಂದ ಕಾಲೇಜು ವರೆಗಿನ ವಿದ್ಯಾರ್ಥಿಗಳಿಗೆ ವಾಟರ್‍ಕಲರ್ ಪೈಂಟಿಂಗ್ ನಡೆಯಲಿದೆ.
ಅ.3ರಂದು ವಿದ್ಯಾನಗರ ಉದಯಗಿರಿಯ ವನಶ್ರೀ ಕಾಂಪ್ಲೆಕ್ಸ್ ನಲ್ಲಿ ಬೆಳಿಗ್ಗೆ 9 ಗಂಟೆಗೆ ನೋಂಖದಾವಣೆ ಆರಂಭಗೊಳ್ಳಲಿದೆ. ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ಹೈಸ್ಕೂಲ್/ಕಾಲೇಜು ವಿದ್ಯಾರ್ಥಿಗಳಿಗೆ ಕ್ವಿಜ್ ಸ್ಪರ್ಧೆ ಮತ್ತು ಮಧ್ಯಾಹ್ನ 2 ರಿಂದ 4 ರವರೆಗೆ ಹೈಸ್ಕೂಲ್/ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಮಲಯಾಳ/ಕನ್ನಡ ಭಾಷಣ ಸ್ಪರ್ಧೆ ನಡೆಯಲಿದೆ. ಕ್ವಿಜ್ ಸ್ಪರ್ಧೆಯಲ್ಲಿ ಒಂದು ಶಿಕ್ಷಣ ಸಂಸ್ಥೆಯಿಂದ ಎರಡು ವಿದ್ಯಾರ್ಥಿಗಳು ಒಳಗೊಂಡ ತಂಡ ಮತ್ತು ಇತರೆ ಸ್ಪರ್ಧೆಗಳಿಗೆ ಪ್ರತಿ ಶಿಕ್ಷಣ ಸಂಸ್ಥೆಯಿಂದ ಪ್ರತಿ ಸ್ಪರ್ಥೆಗೆ ಎರಡು ವಿದ್ಯಾರ್ಥಿಗಳಿಗೆ ಭಾಗವಹಿಸಬಹುದು.
ಸ್ಪರ್ಧೆಗಳಲ್ಲಿ ಎರಡು ಮೂರು ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಅಕ್ಟೋಬರ್ 3 ರಂದು ಸಂಜೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಲಾಗುವುದು. ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಅಕ್ಟೋಬರ್ 8 ರಂದು ನಡೆಯುವ ರಾಜ್ಯ ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾಗಿದೆ. ಜಿಲ್ಲೆಯ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಿಂದ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವವರು ಸಂಬಂಧಿಸಿದ ಶಾಲಾ/ಕಾಲೇಜು ಮುಖ್ಯಸ್ಥರ ಸಾಕ್ಷ್ಯಪತ್ರದೊಂದಿಗೆ ಕಾರ್ಯಕ್ರಮದ ದಿನದಂದು ಬೆಳಗ್ಗೆ 8.30ರೊಳಗೆ ಹಾಜರಾಗಬೇಕಾಗಿದೆ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ (04994255234, 8547603836) ಸಂಪರ್ಕಿಸುವಂತೆ ಸಾಮಾಜಿಕ ಅರಣ್ಯ ಇಲಾಖೆ ಡೆಪ್ಯುಟಿ ಕನ್ಸರ್ವೇಟರ್ ಆಫ್ ಫಾರೆಸ್ಟ್ ಪಿ.ಧನೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.