ಕಾಸರಗೋಡು: ಭಕ್ತಿಯಿಂದ ಕೂಡಿದ ಭಜನೆಯಿಂದ ಭಗವಂತನನ್ನು ಸಂತೃಪ್ತಿಪಡಿಸಲು ಸಾಧ್ಯ ಎಂದು ಸಮಾಜ ಸೇವಕಿ ಮೀರಾ ಕಾಮತ್ ತಿಳಿಸಿದ್ದಾರೆ. ಕಾಸರಗೋಡಿನ ಕೋಟೆಕಣಿ ಶ್ರೀ ರಾಮಾನಾಥ ಸಾಂಸ್ಕøತಿಕ ಭವನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಕುಣಿತ ಭಜನೆ ಎಂಬುದು ಮಾನಸಿಕವಾಗಿಯೂ ಶಾರೀರಿಕವಾಗಿಯೂ ಆಹ್ಲಾದ ತರುವ ಭಕ್ತಿ ಪ್ರಕಾರವಾಗಿದ್ದು, ಇಂದು ಹಲವಾರು ಕುಣಿತಭಜನಾ ತಂಡಗಳ ಮೂಲಕ ಭಕ್ತಿ ಮತ್ತು ಧರ್ಮ ಜಾಗೃತಿ ಕಾರ್ಯ ನಡೆದುಬರುವಂತಾಗಿದೆ. ಕಾಸರಗೋಡಿನ ರಾಮಾನಾಥ ಸಾಂಸ್ಕøತಿಕ ಭವನ ಭಜನಾ ತಂಡಗಳಿಗೆ ವೇದಿಕೆ ಒದಗಿಸಿಕೊಟ್ಟಿರುವ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ದಿವಾಕರ ಆಶೋಕ ನಗರ್ ಅಧ್ಯಕ್ಷತೆ ವಹಿಸಿದ್ದರು. ಗುರುಪ್ರಸಾದ್ ಕೋಟೆಕಣಿ, ಜಗದೀಶ್ ಕೂಡ್ಲು,ಮಹಾಲಿಂಗ ನಾಯ್ಕ್ ,ರಾಮದಾಸ್,ನಿರ್ಮಲಾ, ಕುಶಲ ಕುಮಾರ್, ಮೇಘರಾಜ್, ಶ್ರೀಕಾಂತ್ ಕಾಸರಗೋಡು, ಯೋಗಿಶ್ ಕೋಟೆಕಣಿ, ಆಶ್ವಿನಿಗುರುಪ್ರಸಾದ್, ಕಾವ್ಯ ಕುಶಲ ಉಪಸ್ಥಿತರಿದ್ದರು. ನೃತ್ಯ ಕಲಾವಿದೆ ಭಾರತೀ ಸತೀಶ್, ಮೋಹನ ಆಚಾರ್ಯ ಪುಳ್ಕೂರು, ಬರಹಗಾರ ವಿಷ್ಣು ಶ್ಯಾನುಭಾಗ್ ತೀರ್ಪುಗಾರರಾಗಿ ಸಹಕರಿಸಿದರು. ಕೋಟೆಕಣಿ ಶ್ರೀ ರಾಮಾನಾಥ ಸಾಂಸ್ಕøತಿಕ ಭವನದ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕಾವಯಾಕುಶಲ ವಂದಿಸಿದರು.