ಆಧುನಿಕತೆ ಬೆಳೆದಂತೆಲ್ಲ ಇಂದು ದೇಹಾರೋಗ್ಯ, ಸುಸ್ಥಿತ ಮನಸ್ಸು, ಅಪಘಾತ-ಆಘಾತಗಳಿಂದ ಪಾರಾಗುವ ಬಗೆಗಳ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳುವ ಅಗತ್ಯ ತುರ್ತು ಇದೆ. ಈ ಹಿನ್ನೆಲೆಯಲ್ಲೇ ಯೋಗ, ಕ್ರೀಡೆ, ಜಿಮ್ ನಂತಹ ಅಭ್ಯಾಸ ವ್ಯವಸ್ಥೆಗಳಿಗೆ ಇಂದಿನ ನವ ಜನಾಂಗ ಹೆಚ್ಚು ಆಕರ್ಷಿತಾಗುತ್ತಿರುವುದು ಸಾಮಾನ್ಯವಾಗಿದೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಜಿಮ್, ಬಾಡಿ ಪಿಟ್ ನೆಸ್ ಬಗೆಗೆ ಹೆಚ್ಚೆಚ್ಚು ಆಕರ್ಷಣೆ, ತರಬೇತಿ ಕೇಂದ್ರಗಳು ಪ್ರಚಲಿತ.
ಜಿಮ್- ಜಿಮ್ನಾಸ್ಟಿಕ್ಸ್, ಅಂದರೆ ದೈಹಿಕ ವ್ಯಾಯಾಮವನ್ನು ಅಭ್ಯಾಸ ಮಾಡುವ ಸ್ಥಳ ಎಂದರ್ಥ. ಇದು ಲ್ಯಾಟಿನ್ ಭಾಷೆಯಿಂದ ಬಂದಿದೆ. ಜಿಮ್ನಾಷಿಯಂ ಗ್ರೀಕ್ ಪದ ಜಿಮ್ನಾಸ್ಟಿಕ್ಸ್, ವ್ಯುತ್ಪತ್ತಿ ಜಿಮ್ನಾಜೆನ್, ಇದು 'ದೈಹಿಕ ವ್ಯಾಯಾಮವನ್ನು ಬೆತ್ತಲೆ ಮಾಡಿ' ಎಂದು ಅರ್ಥನೀಡುತ್ತದೆ.
ಕೆಲವು ದೇಶಗಳಲ್ಲಿ ಜಿಮ್ನಾಷಿಯಂ ಎಂಬ ಪದವು ಪ್ರೌಢತೆಗೆ ಸಮಾನವಾದ ಬೌದ್ಧಿಕ ಶಿಕ್ಷಣದ ಕೇಂದ್ರಗಳನ್ನು ಸೂಚಿಸುತ್ತದೆ. ಏಕೆಂದರೆ ಪ್ರಾಚೀನ ಗ್ರೀಸ್‍ನಲ್ಲಿ ಪುರುಷರ ತರಬೇತಿ ಜಿಮ್ನಾಸ್ಟಿಕ್ಸ್ ಇದು ದೈಹಿಕ ಶಿಕ್ಷಣವನ್ನು ಆಧರಿಸಿದ್ದರೆ, ಬೌದ್ಧಿಕ ತರಬೇತಿಯು ಪೂರಕವಾಗಿದೆ (ತತ್ವಶಾಸ್ತ್ರ, ಘೋಷಣೆ, ಕವನ, ಸಂಗೀತ ಮತ್ತು ಗಣಿತ). ಕ್ರಿ.ಪೂ 5 ನೇ ಶತಮಾನದಲ್ಲಿ ಸೋಫಿಸ್ಟ್‍ಗಳು ಕಾಣಿಸಿಕೊಂಡಾಗ, ಅವರು ಪ್ರಾಥಮಿಕವಾಗಿ ಬೌದ್ಧಿಕ ತರಬೇತಿಗೆ ಮೀಸಲಾದ ಶಾಲೆಗಳನ್ನು ಸ್ಥಾಪಿಸಿದರು. ಆದರೆ ವಿಸ್ತರಣೆಯ ಮೂಲಕ ಅವರು ಅದೇ ಹೆಸರನ್ನು ಪಡೆದರು.
ಸಾಮಾನ್ಯವಾಗಿ ಜಿಮ್ ಕೇಂದ್ರಗಳಲ್ಲಿ ಏರೋಬಿಕ್ಸ್, ಯೋಗ, ನೃತ್ಯ ಚಿಕಿತ್ಸೆ, ಪೈಲೇಟ್ಸ್, ಕ್ರಾಸ್ಫಿಟ್, ಟೇ ಬೊ, ವಿಸ್ತರಿಸುವುದು, ಇತ್ಯಾದಿಗಳು ಪ್ರಮುಖವಾದುದಾಗಿದ್ದು, ಸ್ಪಷ್ಟ, ಅನುಭವೀ ಪ್ರಮಾಣೀಕೃತ ಬೋಧಕರಿಂದ ಲಭಿಸುವ ಮಾದರಿ ಜಿಮ್ ಕೇಂದ್ರಗಳನ್ನೇ ನಾವು ಬಳಸುವುದರಿಂದ ಯಶಸ್ಸು ಪಡೆಯಬಹುದು.
ಈ ನಿಟ್ಟಿನಲ್ಲಿ ಉದ್ಯಾನ ನಗರಿ ಬೆಂಗಳೂರಲ್ಲಿ ಅಸಂಖ್ಯ ಜಿಮ್ ಕೇಂದ್ರಗಳು ಅಪೇಕ್ಷಿತರನ್ನು ಕೈಬೀಸಿ ಕರೆಯುತ್ತದೆ. ಈ ಪೈಕಿ ಹೆಚ್ಚು ಜನಪ್ರಿಯ ಪಟ್ಟಿಯಲ್ಲಿ ಜೆಪಿಎಲ್ ಫಿಟ್ನೆಸ್ ಸೆಂಟರ್ ಕೂಡಾ ಒಂದು. ಇಲ್ಲಿಯ ಪ್ರಗಲ್ಬ ಮಾರ್ಗದರ್ಶಿಗಳ ತರಬೇತಿಯಲ್ಲಿ ಅಸಂಖ್ಯ ಜನರು ಕೃತಾರ್ಥರಾಗುತ್ತಿದ್ದಾರೆ. ಇಲ್ಲಿಯ ಮಾರ್ಗದರ್ಶಕರಲ್ಲಿ ಯುವ ತರಬೇತುದಾರನಾಗಿ ಸಾಗರ್ ಮುಕರಂಬಿ ಎದ್ದು ಕಾಣುವ ತರಬೇತುದಾರ.
ಮೂಲತಃ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಭೀಮರಾಯನ ಗುಡಿಯವರಾದ ಇವರು ಕಳೆದ 2019 ರಿಂದ ಬೆಂಗಳೂರಲ್ಲಿ ವ್ಯಾಸಂಗ-ಉದ್ಯೋಗದ ಹಿನ್ನೆಲೆಯಲ್ಲಿ ನೆಲಸಿಕೊಂಡು ಜಿಮ್ ಅಭ್ಯಾಸ ಮತ್ತು ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಜಿಮ್ ಅಕ್ಷರಶಃ ದೇವಾಲಯದಂತಹ ಪವಿತ್ರ ಸ್ಥಳವಾಗಿದ್ದು ದೇಹವನ್ನು ಹದಗೊಳಿಸುವ ಒಂದು ಕಾರ್ಖಾನೆ ಇದ್ದಂತೆ. ನಮ್ಮದೇ ನಿಯಮ, ನಿಬಂಧನೆ, ಶಿಸ್ತುಗಳನ್ನು ಅಳವಡಿಸುವುದು ಮುಖ್ಯ ಅಂಶ ಎಂಬುದು ಸಾಗರ್ ಅವರ ಅಂಬೋಣ. ಹೆಚ್ಚು ಆತ್ಮವಿಶ್ವಾಸವನ್ನು ಅನುಭವಿಸಲು, ಜಿಮ್‍ಗೆ ಹೋಗುವವರ ಮೂಲ ನೀತಿ ಸಂಹಿತೆಯನ್ನು ತಿಳಿದುಕೊಳ್ಳುವುದು ಮುಖ್ಯ. ನಮ್ಮನ್ನು ಒಳಗೊಂಡಂತೆ ಪ್ರತಿಯೊಬ್ಬರನ್ನು ಸುರಕ್ಷಿತವಾಗಿ ಮತ್ತು ಸಂತೋಷವಾಗಿಡಲು ನಿಯಮ ಪಾಲನೆ. ಜಿಮ್ ನ ನಿತ್ಯ ವಸ್ತುಗಳನ್ನು ಬಳಕೆಯ ನಂತರ ಸ್ವಚ್ಛಗೊಳಿಸಿ, ಅಗತ್ಯವಿದ್ದಾಗ ಹಂಚಿಕೊಳ್ಳಿ ಮತ್ತು ಅಸಹ್ಯಕರವಾಗಿರಬೇಡಿ ಎನ್ನುತ್ತಾರೆ ಸಾಗರ್. ಕಿಕ್ಕಿರಿದು ತುಂಬಿರುವ ಜಿಮ್‍ಗಳಲ್ಲಿ ತರಬೇತಿ ಸಲಕರಣೆಗಳೆಲ್ಲವೂ ಅಮೂಲ್ಯವಾದವುಗಳು. ಸ್ಕ್ವಾಟ್ ಬಾರ್‍ಗಳು ಮತ್ತು ಎದೆಯ ಪ್ರೆಸ್ ಬೆಂಚುಗಳಂತಹ ಸೀಮಿತ ಸಾಧನಗಳಿಗೆ ಇದು ವಿಶೇಷವಾಗಿ ಅನ್ವಯಿಸುತ್ತದೆ.
ಕಳೆದ ಮೂರು ವರ್ಷಗಳಿಂದ ಸ್ವಾಧ್ಯಾಯನ ಮತ್ತು ಆಸಕ್ತರಿಗೆ ತರಬೇತಿ ನೀಡುವಲ್ಲಿ ಮಗ್ನರಾಗಿರುವ ಸಾಗರ್ ಮುಕರಂಬಿ ಅವರು ಬೆಂಗಳೂರಿನ ಸಂವಿಕ್ತ್ ವಿದ್ಯಾಭ್ಯಾಸ ಮತ್ತು ಭಾರತೀಯ ಶಿಕ್ಷಣ ಸಂಶೋಧನಾ ಯೋಜನೆಯ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ವೃತ್ತಿ ಒತ್ತಡದ ಮಧ್ಯೆ ಸಂಜೆಯ ಬಿಡುವಿನ ವೇಳೆಯಲ್ಲಿ ಅಧ್ಯಯನ ಮತ್ತು ಜಿಮ್ ಅಧ್ಯಾಪನದ ಮಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.