ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ನೇತೃತ್ವದಲ್ಲಿ ಕಾಸರಗೋಡಿನ ನಾಗರಿಕರು ಹಾಗೂ ಕಲಾವಿದರಿಗಾಗಿ, ಮಂಗಳೂರು ಅತ್ತಾವರದ ಕೆ.ಎಂ.ಸಿ ಆಸ್ಪತ್ರೆ ವತಿಯಿಂದ ಪ್ರಸಿದ್ದ ವೈದ್ಯರುಗಳ ನೇತೃತ್ವದಲ್ಲಿ ಉಚಿತವಾಗಿ ವೈದ್ಯಕೀಯ ತಪಾಸಣಾ ಶಿಬಿರ ಸೆಪ್ಟೆಂಬರ್ 10 ರಂದು ಬೆಳಗ್ಗೆ 9ಕ್ಕೆ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ. ಈ ಸಂದರ್ಭ ಕಣ್ಣಿನ ಸಮಸ್ಯೆ ಹೊಂದಿರುವವರಿಗೆ ಪ್ರತಿಷ್ಠಾನದ ವತಿಯಿಂದ ಉಚಿತವಾಗಿ ಕನ್ನಡಕ ವಿತರಿಸಲಾಗುವುದು.
ಕಾಸರಗೋಡಿನ ಹಿರಿಯ ವೈದ್ಯ ಡಾ. ಬಿ.ಯಸ್. ರಾವ್ ಸಮಾರಂಭ ಉಧ್ಘಾಟಿಸಲಿರುವರು. ಮಧೂರು ಗ್ರಾಪಂ ಅಧ್ಯಕ್ಷ ಕೆ. ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸುವರು. ಕೆ.ಯಂ.ಸಿ. ಯ ಪ್ರಸಿದ್ದ ವೈದ್ಯರಾದ ಹೃದಯ ರೋಗ ತಜ್ಞ ಡಾ.ಪದ್ಮನಾಭ ಕಾಮತ್, ಮಣಿಪಾಲ ಕೆ.ಯಂ.ಸಿ.ಯ ಶೈಲಜಾ, ನೇತ್ರ ತಜ್ಞರು, ಹಾಗು ಕ್ಯಾನ್ಸರ್ ತಜ್ಞರಾದ ಡಾ.ಅಭಿಷೇಕ್ ಕೃಷ್ಣ ಭಾಗವಹಿಸಲಿದ್ದಾರೆ. ಡಾ.ನಾರಾಯಣ ಮಧೂರು,ಡಾ.ರಾಜಾರಾಮ ಭಟ್ ದೇವಕಾನ ಅವರ ಉಪಸ್ಥಿತಿಯಲ್ಲಿ ಕೆ.ಯಂ.ಸಿ.ಯ 10 ಕ್ಕೂ ಹೆಚ್ಚು ಮಂದಿ ವೈದ್ಯರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಹೃದಯ ಸಂಬಂಧಿ ರೋಗ, ಸಾಮಾನ್ಯ ರೋಗ ವಿಭಾಗ, ಎಲುಬು ಮತ್ತು ಕೀಲು ರೋಗ, ಕಿವಿ-ಮೂಗು-ಗಂಟಲು ವಿಭಾಗ, ಕಣ್ಣಿನ ವಿಭಾಗ, ಚರ್ಮ ರೋಗ ತಪಾಸಣೆ, ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ ಕಾರ್ಯಕ್ರಮ ನಡೆಯಲಿರುವುದು. ಅಗತ್ಯ ಇರುವ ಔಷಧ ಸ್ಥಳದಲ್ಲಿ ಲಭ್ಯವಿರಲಿದೆ. ಆರೋಗ್ಯ ಕಾರ್ಡು ಮತ್ತು ಲಾಯಲ್ಟಿ ಕಾರ್ಡ್ ನೋಂದಾವಣೆಯೂ ಈ ಸಂದರ್ಭ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.