ಮಂಜೇಶ್ವರ: ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ ಕಾಸರಗೋಡು ಜಿಲ್ಲಾ ಸಮಿತಿ ಮಂಜೇಶ್ವರ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ 169 ನೇ ಜನ್ಮ ದಿನಾಚರಣೆ ಮತ್ತು 15ನೇ ವಾರ್ಷಿಕೋತ್ಸವ ಇಂದು(ಸೆ.3) ಮಧ್ಯಾಹ್ನ 2:30ಕ್ಕೆ ತಲಪಾಡಿ ಮರಿಯಾಶ್ರಮ ಚರ್ಚ್ ಹಾಲ್ ನಲ್ಲಿ ಏರ್ಪಡಿಸಲಾಗಿದೆ. ಮಂಗಳೂರು ಉಳ್ಳಾಲದ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಮುಖಂಡ ಕೆ.ಟಿ. ಸುವರ್ಣ ಇವರಿಗೆ "ಗುರುಶ್ರೀ "ಕಾಸರಗೋಡು ಜಿಲ್ಲಾ ಪ್ರಶಸ್ತಿ ಪ್ರಧಾನ ನಡೆಯಲಿದೆ. ಜೊತೆಗೆ ಪ್ಲಸ್ ಟು ಅಥವಾ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ "ಗುರುಶ್ರೀ "ಬಂಗಾರದ ಪದಕ ಮತ್ತು ಬೆಳ್ಳಿ ಪದಕ, ರಾಜ್ಯಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಹಾಗೂ ಎಸ್ ಎಸ್ ಎಲ್ ಸಿ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಣೆ ನಡೆಯಲಿದೆ. ಮಧ್ಯಾಹ್ನ 1:30ಕ್ಕೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಒಳಾಂಗಣ ಸ್ಪರ್ಧೆ ನಡೆಯಲಿದೆ.
ಸಭಾ ಕಾರ್ಯಕ್ರಮವನ್ನು ಶ್ರೀಬ್ರಹ್ಮ ಬೈದರ್ಕಳ ಕ್ಷೇತ್ರ ಗರೋಡಿ ಕಂಕನಾಡಿಯ ಶಾಂತಿ ಗಂಗಾಧರ ಉದ್ಘಾಟಿಸುವರು. ವೇದಿಕೆಯ ಜಿಲ್ಲಾಧ್ಯಕ್ಷ ಕೃಷ್ಣ ಶಿವಕೃಪ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಯಂತ ನಡುಬೈಲು, ಚಿತ್ತರಂಜನ್ ಬೋಳಾರ್, ಎ.ಜೆ ಶೇಖರ್, ಕೃಷ್ಣಪ್ಪ ಪೂಜಾರಿ ದೇರಂಬಳ, ಸತೀಶ್ ಕುಂಪಲ, ಕೆ. ಕಮಲಾಕ್ಷ ಸುವರ್ಣ, ಶಿವ ಕೆ ಕರಂದಕ್ಕಾಡ್, ಸುರೇಶ್ ಕೆಪಿ, ಚಂದ್ರಶೇಖರ್ ಉಚ್ಚಿಲ, ಬಾಬು ಶ್ರೀಶಾಸ್ತ ಕಿನ್ಯ, ರಘು ಸಿ ಚೆರುಗೋಳಿ, ನಾರಾಯಣ ಪೂಜಾರಿ, ಹರೀಶ್ ಮುಂಡೋಲಿ, ಗೋಪಾಲಕೃಷ್ಣ ಕೋಟ್ಯಾನ್, ಅಶ್ವಥ್ ಪೂಜಾರಿ ಚಿಪ್ಪಾರ್, ಚಂದ್ರಹಾಸ ಪಂಡಿತ ಹೌಸ್, ಸತೀಶ್ ಕರ್ಕೇರ, ತಿಲಕ್ ಪ್ರಸಾದ್, ಸತೀಶ್ ಕುಂಬಳೆ ವೇದಿಕೆಯಲ್ಲಿ ಉಪಸ್ಥಿತರಿರುವರು.