ಕಾಸರಗೋಡು: ಕೀರಿಕ್ಕಾಡು ಬನಾರಿ ಶ್ರೀ ಗೋಪಾ¯ಕೃಷ್ಣ ಯಕ್ಷಗಾನ ಕಲಾ ಸಂಘದ ಸ್ಮಾರಕ ಸಭಾಭವನದಲ್ಲಿ ಪಾರ್ತಿ ಸುಬ್ಬ ವಿರಚಿತ 'ಪಂಚವಟಿ' ಯಕ್ಷಗಾನ ತಾಳೆಮದ್ದಳೆ ಜರುಗಿತು.
ನಾರಾಯಣ ಪಾಟಾಳಿ ಮಯ್ಯಾಳ ಮತ್ತು ಮನೆಯವರ ವತಿಯಿಂದ ಸೇವಾರೂಪವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭ ಶ್ರೀಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜೆ ನೆರವೇರಿತು.
ಹಿರಿಯ ಭಾಗವತ ವಿಶ್ವವಿನೋದ ಬನಾರಿ ಅವರ ನಿರ್ದೇಶನದಲ್ಲಿ ಆಯೋಜಿಸಲಾದ ತಾಳಮದ್ದಳೆಯಲ್ಲಿ ಭಾಗವತರಾಗಿ ಮಡ್ವ ಶಂಕರನಾರಾಯಣ ಭಟ್ ಮತ್ತು zಯಾನಂದ ಪಾಟಾಳಿ ಮಯ್ಯಾಳ, ಚೆಂಡೆ ಮದ್ದಳೆಯಲ್ಲಿ ಅಪ್ಪಯ್ಯ ಮಣಿಯಾಣಿ ಮಂಡೆಕೋಲು, ವಿಷ್ಣು ಶರಣ ಬನಾರಿ, ಸದಾನಂದ ಪೂಜಾರಿ ಮಯ್ಯಳ, ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ ಸಹಕರಿಸಿದರು.
ಅರ್ಥಧಾರಿಯಾಗಿ ವೆಂಕಟ್ರಮಣ ಮಾಸ್ಟರ್ ದೇಲಂಪಾಡಿ, ಕಲ್ಲಡ್ಕಗುತ್ತು ರಾಮಯ್ಯ ರೈ, ಪ್ರಭಾಕರ ಆಚಾರ್ಯ ಹಿರಿಯೂರ್, ಯಂ ರಮಾನಂದ ರೈ ದೇಲಂಪಾಡಿ, ಬಾಲಕೃಷ್ಣ ಗೌಡ ದೇಲಂಪಾಡಿ, ನಾರಾಯಣ ದೇಲಂಪಾಡಿ ಐತ್ತಪ್ಪ ಗೌಡ ಮುದಿಯಾರು, ರಾಮನಾಯ್ಕ ದೇಲಂಪಾಡಿ, ಸಂಜೀವ ರಾವ್ ಮಯ್ಯಾಳ, ಪದ್ಮನಾಭ ರಾವ್ ಮಯ್ಯಾಳ
ಭಾಗವಹಿಸಿದರು.
ಯಕ್ಷಸಿರಿ ಕಲಾವೇದಿಕೆ ಖಂಡಿಗೆ ಮೂಲೆ ಇದರ ಸಂಚಾಲಕ ಶ್ಯಾಮಭಟ್ ಕೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಕಲಾ ಕಾರ್ಯಕ್ರಮದಲ್ಲಿ ನಂದಕಿಶೋರ ಬನಾರಿ ಸ್ವಾಗತಿಸಿದರು. ಗೋಪಾಲಕೃಷ್ಣ ರೈ ಮುದಿಯಾರು ಕಾರ್ಯಕ್ರಮ ನಿರೂಪಿಸಿದರು. ಪುನೀತ್ ರಾವ್ ಮಯ್ಯಾಳ ವಂದಿಸಿದರು.