ಶೋರ್ನೂರು: ವಂದೇಭಾರತ್ ಎಕ್ಸ್‍ಪ್ರೆಸ್ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಯಲ್ಲಿ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
ವಿದ್ಯಾರ್ಥಿಗಳು ರೈಲ್ವೇ ಭದ್ರತಾ ಪಡೆಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತರು ಮಲಪ್ಪುರಂ ತಾನೂರ್ ಬಳಿಯ ಪ್ರೌಢಶಾಲಾ ವಿದ್ಯಾರ್ಥಿಗಳು.
ಪ್ರಕರಣಕ್ಕೆ ಸಂಬಂಧಿಸಿದ ಘಟನೆ ಆಗಸ್ಟ್ 21 ರಂದು ನಡೆದಿತ್ತು. ವಿದ್ಯಾರ್ಥಿಗಳು ವಂದೇ ಭಾರತ್ ಎಕ್ಸ್‍ಪ್ರೆಸ್‍ನ ಕಿಟಕಿಗೆ ಕಲ್ಲೆಸದಿದ್ದರಿಂದ ಒಡೆದಿತ್ತು.
ಘಟನೆಯಲ್ಲಿ ಬಂಧಿತ ಇಬ್ಬರು ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಕರು ಮತ್ತು ಪೋಷÀಕರ ಸಮ್ಮುಖದಲ್ಲಿ ವಿಚಾರಣೆ ನಡೆಸಲಾಯಿತು. ವಿಚಾರಣೆ ವೇಳೆ ಮಕ್ಕಳು ಎಕ್ಸ್‍ಪ್ರೆಸ್‍ಗೆ ಕಲ್ಲು ತೂರಿರುವುದನ್ನು ಒಪ್ಪಿಕೊಂಡಿದ್ದಾರೆ. ಇಬ್ಬರನ್ನೂ ಇಂದು ಮಲಪ್ಪುರಂನ ತವನೂರಿನಲ್ಲಿರುವ ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಯಿತು.