ಕಾಸರಗೋಡು: ಜಿಲ್ಲೆಯಲ್ಲಿ ಟ್ರಾನ್ಸ್‍ಜೆಂಡರ್ ವ್ಯಕ್ತಿಗಳು ಎದುರಿಸುತ್ತಿರುವ ದೌರ್ಜನ್ಯಗಳು, ಅಪಾಯಗಳು, ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ದೂರುಗಳನ್ನು ಪರಿಹರಿಸಲು ಪ್ರತಿ ಪ್ರಕರಣಕ್ಕೆ ರೂ.500 ದರದಲ್ಲಿ ಗೌರವಧನದ ಆಧಾರದ ಮೇಲೆ ಸಪೆÇೀರ್ಟ್ ಕೌನ್ಸಿಲರ್ ರನ್ನು ನೇಮಿಸಲಾಗುತ್ತದೆ. ಪದವಿ, ಕೌನ್ಸೆಲಿಂಗ್‍ನಲ್ಲಿ ಅನುಭವ ಹೊಂದಿರುವ ಮತ್ತು ಸೇವೆ ಸಲ್ಲಿಸಲು ಇಚ್ಚಿಸುವ ಟ್ರಾನ್ಸ್‍ಜೆಂಡರ್ ಕಮ್ಯುನಿಟಿಯಲ್ಲಿರುವವರಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಸೆಪ್ಟೆಂಬರ್ 15 ರೊಳಗೆ ಕಾಸರಗೋಡು ಸಿವಿಲ್ ಠಾಣೆಯ ಜಿಲ್ಲಾ ಸಾಮಾಜಿಕ ನ್ಯಾಯ ಕಛೇರಿಯಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ 04994 255074.ಸಂಪರ್ಕಿಸಬಹುದು.