ಮುಳ್ಳೇರಿಯ: ಬ್ಲಾಕ್ ಪಂಚಾಯತಿ ಅಧೀನದಲ್ಲಿರುವ ಕಾರಡ್ಕ, ದೇಲಂಪಾಡಿ ಪ್ರೀಮೆಟ್ರಿಕ್ ಹಾಸ್ಟಲ್‍ಗಳ ವಾಸಿಗಳಿಗೆ ಟ್ಯೂಷನ್ ನೀಡಲು ಶಿಕ್ಷಕರನ್ನು ನೇಮಿಸಲಾಗುವುದು. ಕಾರಡ್ಕ ಸರ್ಕಾರಿ ಪ್ರೀಮೆಟ್ರಿಕ್ ಹಾಸ್ಟೆಲ್‍ನಲ್ಲಿ ಯು.ಪಿ ಮಟ್ಟದಲ್ಲಿ ಒಂದು, ದೇಲಂಪಾಡಿ ಸರ್ಕಾರಿ ಪ್ರೀಮೆಟ್ರಿಕ್ ಹಾಸ್ಟೆಲ್‍ನಲ್ಲಿ ಹೈಸ್ಕೂಲ್ ಮಟ್ಟದಲ್ಲಿ ಗಣಿತ, ನಾಚುರಲ್ ಸಯನ್ಸ್, ಫಿಸಿಕಲ್ ಸಯನ್ಸ್, ಹಿಂದಿ ಮುಂತಾದ ವಿಷಯಗಳಲ್ಲಿ ಒಂದು, ಯು.ಪಿ ಮಟ್ಟದಲ್ಲಿ ಎರಡು ಖಾಲಿ ಹುದ್ದೆಗಳಿವೆ. ನಿರುದ್ಯೋಗಿ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರು, ಟಿ.ಟಿ.ಸಿ ಅರ್ಹತೆ ಇರುವವರು, ನಿವೃತ್ತ ಅಧ್ಯಾಪಕರಿಗೂ ಅರ್ಜಿ ಸಲ್ಲಿಸಬಹುದು. ಬಿ.ಎಡ್ ವಿದ್ಯಾರ್ಹತೆ ಹೊಂದಿರುವವರಿಗೆ ಮತ್ತು ಸ್ಥಳೀಯ ನಿವಾಸಿಗಳಿಗೆ ಆದ್ಯತೆ ನೀಡಲಾಗುವುದು. ಹೈಸ್ಕೂಲ್ ತರಗತಿಯಲ್ಲಿ ಟ್ಯೂಷನ್ ಅಧ್ಯಾಪಕರಿಗೆ 6,000 ರೂಪಾಯಿ ಮತ್ತು ಯು.ಪಿ ಮಟ್ಟದಲ್ಲಿ 4,500 ರೂಪಾಯಿಗಳು ಮಾಸಿಕ ಗೌರವ ಧನ ನೀಡಲಾಗುವುದು. ಒಂದು ತಿಂಗಳಿನಲ್ಲಿ 20 ಗಂಟೆಗಳ ತರಗತಿಗಳನ್ನು ಬೆಳಿಗ್ಗೆ ಅಥವಾ ಸಂಜೆ ತೆಗೆದುಕೊಳ್ಳಬೇಕು. ಆಸಕ್ತ ಅಭ್ಯರ್ಥಿಗಳು ಬಯೋಡಾಟ ಮತ್ತು ಪ್ರಮಾಣಪತ್ರಗಳ ಪ್ರತಿಗಳೊಂದಿಗೆ ಸೆಪ್ಟೆಂಬರ್ 21 ರೊಳಗೆ ಕಾರಡ್ಕಕ ಬ್ಲಾಕ್ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿ ಅಭಿವೃದ್ಧಿ ಕಛೇರಿಯಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.