ಬದಿಯಡ್ಕ: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ತೃತೀಯ ಚಾತುರ್ಮಾಸ್ಯ ವ್ರತಾಚರಣೆಯ 60ನೇ ದಿನ ಗುರುವಾರ ಮಾನ್ಯ ವಲಯ ಸಮಿತಿಯ ವತಿಯಿಂದ ಒಂದು ದಿನದ ಪೂರ್ಣ ಸೇವೆ ನಡೆಯಿತು. ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ದೀಪಬೆಳಗಿಸಿ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡಿದರು. ಬೆಳಗ್ಗೆ ಮಾನ್ಯ ಶ್ರೀ ಅಯ್ಯಪ್ಪ ಭಜನಾ ಸಂಘ, ಮಹಾವಿಷ್ಣು ಮಹಿಳಾ ಭಜನಾ ಸಂಘ ಕಾರ್ಮಾರು, ಶ್ರೀ ಶಾಸ್ತಾ ಮಹಿಳಾ ಭಜನಾ ಸಂಘ ಮಾನ್ಯ, ಶ್ರೀ ಮಹಾವಿಷ್ಣು ಭಜನಾ ಸಂಘ ಕಾರ್ಮಾರು ಇವರಿಂದ ಭಜನೆ, ವೃಂದಾವನ ಕುಣಿತ ಭಜನಾ ಸಂಘ ಮಾನ್ಯ ಹಾಗೂ ತತ್ವಮಸಿ ಕುಣಿತ ಭಜನಾ ಸಂಘ ಚುಕ್ಕಿನಡ್ಕ ಇವರಿಂದ ಕುಣಿತ ಭಜನೆ ನಡೆಯಿತು. ಮಧ್ಯಾಹ್ನ ವಲಯ ಸಮಿತಿಯ ವತಿಯಿಂದ ಪಾದುಕಾ ಪೂಜೆ, ಭಿಕ್ಷಾಸೇವೆ ನಡೆಯಿತು. ಅಪರಾಹ್ನ ಶಮಾ ವಳಕುಂಜ ಇವರಿಂದ ಭರತ ನೃತ್ಯ ವೈಭÀವ, ಶ್ರೀ ಗುರುಗಳಿಂದ ಅನುಗ್ರಹ ಮಂತ್ರಾಕ್ಷತೆ, ವಿದುಷಿ ವಾಣಿಪ್ರಸಾದ ಕಬೆಕ್ಕೋಡು ಇವರ ಸುನಾದ ಸಂಗೀತ ಕಲಾಶಾಲೆ ಬದಿಯಡ್ಕ ಅರ್ಪಿಸುವ ಸುನಾದ ಯುವಭಾರತಿ, ಸಂಜೆ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ‘ವಾಲಿಮೋಕ್ಷ’ ‘ಅಗ್ರಪೂಜೆ’ ಪ್ರದರ್ಶನಗೊಂಡಿತು.