HEALTH TIPS

ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ತೀರ್ಪು ದೇಶದ ಕಾನೂನು ವ್ಯವಸ್ಥೆಗೆ ನೀಡಿದ ಮಹತ್ವದ ಕೊಡುಗೆ: ಸುಪ್ರೀಂ ಕೋರ್ಟು ನ್ಯಾಯಾಧೀಶ

           ಕಾಸರಗೋಡು: ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆ ನಿಟ್ಟಿನಲ್ಲಿ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ತೀರ್ಪು ದೇಶದ ಕಾನೂನು ವ್ಯವಸ್ಥೆಗೆ ನೀಡಿದ ಮಹತ್ವದ ಕೊಡುಗೆಯಾಗಿದೆ ಎಂದು ಸುಪ್ರೀಂಕೋರ್ಟು ನ್ಯಾಯಾಧೀಶ, ನ್ಯಾಯಮೂರ್ತಿ ಸರಸ ವೆಂಕಟನಾರಾಯಣ ಭಟ್ಟಿ ತಿಳಿಸಿದ್ದಾರೆ. 

               ಅವರು ಎಡನೀರು ಮಠದ ಸಭಾಂಗಣದಲ್ಲಿ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ವರ್ಸಸ್ ಕೇರಳ ಸ್ಟೇಟ್ ಆಸ್ತಿ ಹಕ್ಕು ಸಂವಿಧಾನಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟು ನೀಡಿದ್ದ  ಐತಿಹಾಸಿಕ ತೀರ್ಪಿನ 50ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಲಾದ ಸರಣಿ ಕಾರ್ಯಕ್ರಮ ಹಾಗೂ ವಿಚಾರ ಸಂಕಿರಣದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. 

                   ಸಂವಿಧಾನಾತ್ಮಕ ಹಕ್ಕಿನ ವಿರುದ್ದದ ತೀರ್ಪು ಪ್ರಶ್ನಿಸಿ ಎಡನೀರು ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಕೈಗೊಂಡ ಕಾನೂನು ಹೋರಾಟ ದೇಶದ ಸಂವಿಧಾನದಲ್ಲಿ ಮಹತ್ವದ ಸ್ಥಾನ ಪಡೆದುಕೊಳ್ಳುವುದರ ಜತೆಗೆ ಎಡನೀರು ಮಠದ ಪರಂಪರೆ ಉನ್ನತಿಗೇರಲು ಸಾಧ್ಯವಾಗಿದೆ. ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ತೀರ್ಪಿಗೆ ಸಂಬಂಧಿಸಿ ಕೇಸು ಕಾನೂನು ವಿದ್ಯಾರ್ಥಿಗಳಿಗೆ ನಿರಂತರ ಅಧ್ಯಯನದ ವಿಷಯವಾಗಿದೆ. ಕೇಶವಾನಂದ ಭಾರತೀ ಸ್ವಾಮೀಜಿ ತೀರ್ಪಿನ 50ವರ್ಷಗಳ ಪ್ರಯಾಣ ದೇಶದ ಕಾನೂನು ಮತ್ತು ಸಂವಿಧಾನದ ಚರಿತ್ರೆಯಲ್ಲಿ   ಎಂದು ತಿಳಿಸಿದರು. 

            ಕೇರಳ ಉಚ್ಛ ನ್ಯಾಯಾಲಯದ ನ್ಯಾಯಾಧೀಶ ನ್ಯಾಐಮೂರ್ತಿ ಎನ್ ನಗರೇಶ್ ದಿಕ್ಸೂಚಿ ಭಾಷಣ ಮಾಡಿ, ಸ್ವತಂತ್ರ್ಯಾನಂತರದ 75ವರ್ಷಗಳಲ್ಲಿ ದೇಶದ ಜನತೆಯ ನಿಸ್ವಾರ್ಥ ಸೇವೆಯಿಂದ ಮಹತ್ತರ ಬದಲಾವಣೆಗೆ ಸಾಕ್ಷಿಯಾಗಿದೆ. ಶಿಕ್ಷಣ, ಕೃಷಿ, ವೈದ್ಯಕೀಯ ಸೇರಿದಂತೆ ಮಹತ್ವದ ಬದಲಾವಣೆಗೆ ದೇಶ ಸಾಕ್ಷಿಯಾಗಿದೆ. ದೇಶದ ಸಂವಿಧಾನ ಪ್ರತಿಯೊಬ್ಬ ಪ್ರಜೆಗಳಿಗೆ ಸಮಾನತೆಯನ್ನು ಕಲ್ಪಿಸಿದೆ. 

                   ಶ್ರೀ ಕೇಶವಾನಂದ ಭಾರತೀ ತೀರ್ಪಿನ ಪರಿಣಾಮ ನಮ್ಮ ಸಂವಿಧಾನ ಮತ್ತಷ್ಟು ಬಲಿಷ್ಟಗೊಳ್ಳಲು ಕಾರಣವಾಗಿದೆ ಎಂದು ತಿಳಿಸಿದರು.   ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಸಂವಿಧಾನದಲ್ಲಿ ಚರಿತ್ರೆ ಸೃಷ್ಟಿಸಲು ಕಾರಣವಾಗಿರುವ ಐತಿಹಾಸಿಕ ತೀರ್ಪು ಸಂತರೊಬ್ಬರ ಹೆಸರಲ್ಲಿ ಗುರುತಿಸಲ್ಪಟ್ಟಿರುವುದು ಧಾರ್ಮಿಕ ವ್ಯವಸ್ಥೆಗೆ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.  

                 ಹಿರಿಯ ವಕೀಲರಾದ ಉದಯ್ ಹೊಳ್ಳ, ಅಸಫ್ ಆಲಿ, ಜಿಲ್ಲಾ ನ್ಯಾಯಾಧೀಶ ಕೆ. ಕೆ.ಎ ಬಾಲಕೃಷ್ಣನ್, ತೀರ್ಪಿನ ಐವತ್ತನೇ ವರ್ಷಾಚರಣೆ ಸಮಿತಿ ಅಧ್ಯಕ್ಷ, ವಕೀಲ ಎಂ. ನಾರಾಯಣ ಭಟ್  ಮೊದಲಾದವರು ಉಪಸ್ಥಿತರಿದ್ದರು. ವಕೀಲರಾದ ಕೆ.ಆರ್ ಆಚಾರ್ಯ ಪುತ್ತೂರು ಸ್ವಾಗತಿಸಿದರು. ಮುರಳೀಧರ ಬಳ್ಳಕ್ಕುರಾಯ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries