ತಿರುವನಂತಪುರಂ: ಕೇರಳಕ್ಕೆ ಭಾರತೀಯ ಆಹಾರ ನಿಗಮವು ಒಎಂಎಸ್‍ಎಸ್ ಹರಾಜು ಮೂಲಕ ಕಡಿಮೆ ಬೆಲೆಗೆ ಗೋಧಿಯನ್ನು ನೀಡಲಿದೆ.
ಗೋಧಿ ಉತ್ಪನ್ನಗಳ ಉತ್ಪಾದಕರು/ಬಳಕೆದಾರರಿಗೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ –ಒಎಂಎಸ್ ಎಸ್ (ಡಿ) ಮೂಲಕ ಎಫ್.ಸಿ.ಐ ಡಿಪೋಗಳಿಂದ ಗೋಧಿ ಲಭ್ಯವಾಗುತ್ತದೆ. ಗೋಧಿಗೆ (ಎಫ್ ಎ.ಕ್ಯು) ಕ್ವಿಂಟಲ್‍ಗೆ 2150 ರೂ ಅಥವಾ (ಯು.ಆರ್.ಎಸ್) ಪ್ರತಿ ಕ್ವಿಂಟಲ್‍ಗೆ 2125 ರೂ.ಇರಲಿದೆ. ಅದೇ ರೀತಿ ಅಕ್ಕಿ ಕ್ವಿಂಟಲ್ ಗೆ 2900 ರೂ.ಗೆ ದೊರೆಯಲಿದೆ. ಅಕ್ಕಿ ಉತ್ಪನ್ನಗಳ ವ್ಯಾಪಾರಿಗಳು/ಎಂಪನೆಲ್ಡ್/ ತಯಾರಕರು ಹರಾಜಿನಲ್ಲಿ ಭಾಗವಹಿಸಬಹುದು. https://www.valuejunction.in/fci/ ಗೆ ಭೇಟಿ ನೀಡಿ ಅಥವಾ ಟೋಲ್ ಫ್ರೀ ಸಂಖ್ಯೆ 1800 102 7136 ಅನ್ನು ಸಂಪರ್ಕಿಸಬಹುದು.