ಕಾಸರಗೋಡು: ಕೋವಿಡ್ ಕಾಲಾವಧಿಯಲ್ಲಿ ರದ್ದುಗೊಳಿಸಲಾದ ಎಲ್ಲಾ ರೈಲುಗಳ ಮರುಸ್ಥಾಪನೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸುವ ಬಗ್ಗೆ ದಕ್ಷಿಣ ರೈಲ್ವೆ ಜನರಲ್ ಮ್ಯಾನೇಜರ್ ಕಚೇರಿಯ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕ (ಪಿಸಿಎಂಒ)ರನ್ನು ಭೇಟಿಯದ ಸಂದರ್ಭ ಸ್ಪಷ್ಟ ಭರವಸೆ ಲಭಿಸಿರುವುದಾಗಿ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ತಿಳಿಸಿದ್ದಾರೆ.
ಅ. 1ರಿಂದ ಕೊಯಂಬತ್ತೂರುಜಂಕ್ಷನ್-ಮಂಗಳೂರು ಜಂಕ್ಷನ್ ಇಂಟರ್‍ಸಿಟಿ ಸೂಪರ್‍ಫಾಸ್ಟ್ ಎಕ್ಸ್‍ಪ್ರೆಸ್ ರೈಲಿಗೆ ನೀಲೇಶ್ವರ ರೈಲ್ವೆ ನಿಲ್ದಾಣದಲ್ಲಿ ಒಂದು ನಿಮಿಷ್ ನಿಲುಗಡೆ ಕಲ್ಪಿಸಲಾಗಿದೆ. ಇದೇ ರೀತಿ ಮಂಗಳೂರು ಜಂಕ್ಷನ್-ಕೊಯಂಬತ್ತೂರು ಜಂಕ್ಷನ್ ಇಂಟರ್‍ಸಿಟಿ ಸೂಪರ್‍ಫಾಸ್ಟ್ ಎಕ್ಸ್‍ಪ್ರೆಸ್ ರೈಲಿಗೂ ಒಂದು ನಿಮಿಷದ ನಿಲುಗಡೆ ಕಲ್ಪಿಸಲಾಗಿದೆ. ನೀಲೇಶ್ವರಂ ಇಂಟರ್‍ಸಿಟಿ ಸ್ಟಾಪ್ ಸೇರಿದಂತೆ ಹೊಸ ವಂದೇಭಾರತ್ ರೈಲು ಮಾರ್ಗದ ಬಗ್ಗೆ ಚರ್ಚಿಸಲು ದಕ್ಷಿಣ ರೈಲ್ವೆ ಜನರಲ್ ಮ್ಯಾನೇಜರ್ ಕಚೇರಿಯ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕ (ಪಿಸಿಎಂಒ) ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ ಸಂದರ್ಭ ಭರವಸೆ ಲಭಿಸಿತ್ತು ಎಂದು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ತಿಳಿಸಿದ್ದಾರೆ.