ಮಂಗಳೂರು: ಬಸ್ರೂರಿನ ಆಲದ ಮರವೊಂದರ ಕೆಳಗೆ ಇರುವ ತುಳುವೇಶ್ವರ ದೇವಸ್ಥಾನದ ಅಭಿವೃದ್ಧಿಗೆ 'ತುಳುವೆರೆ ಆಯನೊ ಕೂಟ ಕುಡ್ಲ' ಸಂಕಲ್ಪ ತೊಟ್ಟಿದೆ ಎಂದು ಕೂಟದ ಅಧ್ಯಕ್ಷೆ ಶಮಿನ ಆಳ್ವ ತಿಳಿಸಿದರು.
ಮಂಗಳೂರು: ಬಸ್ರೂರಿನ ಆಲದ ಮರವೊಂದರ ಕೆಳಗೆ ಇರುವ ತುಳುವೇಶ್ವರ ದೇವಸ್ಥಾನದ ಅಭಿವೃದ್ಧಿಗೆ 'ತುಳುವೆರೆ ಆಯನೊ ಕೂಟ ಕುಡ್ಲ' ಸಂಕಲ್ಪ ತೊಟ್ಟಿದೆ ಎಂದು ಕೂಟದ ಅಧ್ಯಕ್ಷೆ ಶಮಿನ ಆಳ್ವ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆಲದ ಮರದ ಕೆಳಗೆ ಇರುವ ದೇವಸ್ಥಾನ ಬೇರುಗಳ ಒಳಗೆ ಇದ್ದು ನಿತ್ಯ ಪೂಜೆ ಆಗುತ್ತಿದೆ.
ಇದೇ 30ರಂದು ಮಧ್ಯಾಹ್ನ 3.30ಕ್ಕೆ ಕೂಟದ ಪದಗ್ರಹಣ ಸಮಾರಂಭ ನಡೆಯಲಿದ್ದು 2 ಗಂಟೆಗೆ 'ಜೋಕ್ಲೆನ ಮಿನದನ' ಕಾರ್ಯಕ್ರಮ ಇರುತ್ತದೆ. ಸಂಜೆ 4 ಗಂಟೆಯಿಂದ ನಡೆಯುವ ಸಮಾರಂಭದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಕಟೀಲು ಶ್ರೀ ಕ್ಷೇತ್ರದ ಹರಿನಾರಾಯಣ ಅಸ್ರಣ್ಣ, ಸಂಸದ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್ ಮುಖಂಡ ರಮಾನಾಥ ರೈ ಮತ್ತಿತರರು ಪಾಲ್ಗೊಳ್ಳುವರು. 'ಸಿರಿದೇವಿ ಮಾತ್ಮೆ' ಪುಸ್ತಕ ಬಿಡುಗಡೆ, ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಅವರು ತಿಳಿಸಿದರು.
ಕೂಟದ ಉಪಾಧ್ಯಕ್ಷದಾದ ಗೋಪಾಡ್ಕರ್, ಆಶಾ ಶೆಟ್ಟಿ ಅತ್ತಾವರ, ಸಂಚಾಲಕ ಸರಪಾಡಿ ಅಶೋಕ್ ಶೆಟ್ಟಿ, ಕಾರ್ಯದರ್ಶಿ ರಾಜೇಶ ಹೆಗ್ಡೆ ಪೊಳಲಿ ಇದ್ದರು.