ಉಪ್ಪಳ: ಮಕ್ಕಳಿಗೆ ಬಾಲ್ಯದಿಂದ ಸಂಸ್ಕಾರ ನೀಡಿ, ಜಗತ್ತಿಗೆ ಬೆಳಕನ್ನು ತೋರಿಸುವ ತಾಯಿ ತಂದೆಯ ಪರಿಪಾಲನೆಯಿಂದ ದೇವರ ಪೂಜೆಗಿಂತ ಮಿಗಿಲಾದ ಫಲಪ್ರಾಪ್ತಿಯಾಗುವುದು ಎಂದು ಒಡಿಯೂರಿನ ಸಾಧ್ವಿ ಶ್ರೀ ಮಾತಾನಂದಮಯಿ ತಿಳಿಸಿದ್ದಾರೆ.
ಅವರು ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ನಡೆದ ಮಾತೃಪೂಜನ'ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.
ಸ್ವಾಮೀಜಿಯ ಆಶಯದಂತೆ ವಿದ್ಯಾಕೇಂದ್ರವು ನಡೆಯುತ್ತಿರುವುದು ಸಂತಸದವಿಚಾರ. ಮಕ್ಕಳಿಗೆ ತಾಯಿ ತಂದೆಯನ್ನು ಗೌರವಿಸಿಸುವುದು, ದೇವರಬಗ್ಗೆ ಭಕ್ತಿ ಮುಂತಾದ ಸಂಸ್ಕಾರವನ್ನು ಬಾಲ್ಯದಿಂದಲೇ ನೀಡಿ, ಅವರನ್ನು ಸತ್ಪ್ರಜೆಗಳನ್ನಾಗಿ ಮಾಡುವುದೇ ಇಂದು ವಿದ್ಯಾಲಯಗಳ ಆದ್ಯ ಕರ್ತವ್ಯವಾಗಬೇಕು ಎಂದು ತಿಳಿಸಿದರು.
ವೇದ ಮೂರ್ತಿ ಪರಕ್ಕಜೆ ಶ್ರೀ ಅನಂತ ನಾರಾಯಣ ಭಟ್ ಪೂಜಾ ವಿಧಿವಿಧಾನ ನಡೆಸಿಕೊಟ್ಟರುನೀ ಸಂದರ್ಭ ಮಾತನಾಡಿದ ಅವರು ತಾಯಿಯ ಋಣ ತೀರಿಸಲು ಎಂದಿಗೂ ಸಾಧ್ಯವಿಲ್ಲ. ಮಾತೃಯಾನ ಎಂದಿಗೂ ಕೊನೆಗಾಣದು ಎಂದು ತಿಳಿಸಿದರು. ಟ್ರಸ್ಟ್ ಉಪಾಧ್ಯಕ್ಷ ಪೆಲತ್ತಡ್ಕ ರಾಮಕೃಷ್ಣ ಭಟ್, ಸದಸ್ಯ ಸದಾಶಿವ ಭಟ್, ಶ್ರೀಹರಿ ಭಟ್‍ತಲೆಂಗಳ ಉಪಸ್ಥಿತರಿದ್ದರು. ಮ್ಯಾನೇಜಿಂಗ್ ಟ್ರಸ್ಟಿ ಹಿರಣ್ಯ ಮಹಾಲಿಂಗ ಭಟ್ ಸ್ವಾಗತಿಸಿದರು. ಕೋಶಾಧಿಕಾರಿ ಮಾಣಿಪ್ಪಾಡಿ ಶ್ರೀನಾರಾಯಣ ಭಟ್ ವಂದಿಸಿದರು.
ಮಾತೃಪೂಜನ ಕಾರ್ಯಕ್ರಮದಲ್ಲಿ ಇನ್ನೂರಕ್ಕೂ ಹೆಚ್ಚುಮಂದಿ ಮಾತೆಯರು ಪಾಲ್ಗೊಂಡಿದ್ದರು.ಈ ಸಂಧರ್ಭ ವಿದ್ಯಾರ್ಥಿಗಳು, ಶಿಕ್ಷಕರು ತಾಯಿಯ ಕುರಿತಾದ ಹಾಡುಗಳು, ಭಜನೆ , ಹನುಮಾನ್ ಚಾಲೀಸ್‍ಗಳನ್ನು ಹಾಡಿದರು.