ನವದೆಹಲಿ: ಚಿಕಿತ್ಸೆಗೆ ಬಂದ ರೋಗಿಗೆ ನಕಲಿ ವೈದ್ಯರೊಬ್ಬರು ಚುಚ್ಚುಮದ್ದು ನೀಡಿದ್ದಾರೆ. ಈ ಪರಿಣಾಮವಾಗಿ, ರೋಗಿಯು ಕೆಲವು ಗಂಟೆಗಳ ನಂತರ ಕ್ಲಿನಿಕ್ನಲ್ಲಿ ನಿಧನರಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
38 ವರ್ಷದ ವ್ಯಕ್ತಿಯನ್ನು ಓಂ ಪ್ರಕೇಶ್ ಗುರ್ಜರ್ ಮೃತ. ಬುಂದಿ ಜಿಲ್ಲೆಯ ಇಂದರ್‌ಗಢ್ ಪೊಲೀಸ್ ಠಾಣೆ ವ್ಯಾಪ್ತಿಯ ದೇವಪುರ ಗ್ರಾಮದ ನಿವಾಸಿ, ಕಳೆದ ಮಂಗಳವಾರ ಇಂದರ್‌ಗಢ್ ಪಟ್ಟಣದ ಸುಮರ್‌ಗಂಜ್ ಮಂಡಿ ರಸ್ತೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನಂತರ ತನಿಖೆ ನಡೆದ ಪೊಲೀಸರಿಗೆ ನಕಲಿ ವೈದ್ಯನ ಕುರಿತಾಗಿ ಗೊತ್ತಾಗಿದೆ.
ಪೊಲೀಸರ ಪ್ರಕಾರ, ರಾಜಸ್ಥಾನದ ಬುಂದಿ ಜಿಲ್ಲೆಯ ಇಂದರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ದೇವಪುರ ಗ್ರಾಮದ ಓಂ ಪ್ರಕೇಶ್ ಗುರ್ಜರ್ (38) ಕೆಮ್ಮು ಮತ್ತು ಜ್ವರದಿಂದ ಖಾಸಗಿ ಕ್ಲಿನಿಕ್‌ಗೆ ಹೋಗಿದ್ದರು. ಅಲ್ಲಿ ವೈದ್ಯರಾಗಿರುವ ಹರಿಓಂ ಸೈನಿ (35), ಇಂಜೆಕ್ಷನ್ವೊಂದನ್ನು ನೀಡಿದ್ದಾರೆ. ಬಳಿಕ ಪ್ರಕೇಶ್ ಗುರ್ಜರ್ ಅವರ ಸ್ಥಿತಿ ಹದಗೆಟ್ಟಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಳಿಕ ಶವವನ್ನು ಕಾರಿನಲ್ಲಿ ತೆಗೆದುಕೊಂಡು ಹೋಗಿ ರಸ್ತೆ ಬದಿ ಎಸೆದಿದ್ದಾರೆ. ಮೃತರ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ತನಿಖೆಯಲ್ಲಿ ಆಘಾತಕಾರಿ ವಿಷಯಗಳು ಬೆಳಕಿಗೆ ಬಂದಿವೆ.
ಆ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ನೈಜ ಸಂಗತಿಯನ್ನು ಪತ್ತೆ ಹಚ್ಚಿದ್ದಾರೆ. ಖಾಸಗಿ ಕ್ಲಿನಿಕ್ ವೈದ್ಯರೇ ನಕಲಿ ವೈದ್ಯನಾಗಿದ್ದು, ಜಿಎನ್‌ಎಂ ಪದವಿ ಪಡೆದಿರುವುದಾಗಿ ಹೇಳಿಕೊಂಡು ಜನರ ಜೀವದ ಜತೆ ಚೆಲ್ಲಾಟವಾಡುತ್ತಿರುವುದು ಕಂಡು ಬಂದಿದೆ. ಜನರಲ್ ನರ್ಸಿಂಗ್ ಮತ್ತು ಮಿಡ್‌ವೈಫರಿ (ಜಿಎನ್‌ಎಂ) ಡಿಪ್ಲೋಮಾ ಹೋಲ್ಡರ್ ಎಂದು ಹೇಳಿಕೊಂಡು ಅಮಾಯಕರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದ ನಕಲಿ ವೈದ್ಯನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.