ನವದೆಹಲಿ: ಹೊಸ ಸಂಸತ್ ಭವನದ ಸಿಬ್ಬಂದಿಗೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಸಮವಸ್ತ್ರಗಳನ್ನು ಧರಿಸದಿರಲು ಸಂಸತ್ತಿನ ಭದ್ರತಾ ಸಿಬ್ಬಂದಿ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನವದೆಹಲಿ: ಹೊಸ ಸಂಸತ್ ಭವನದ ಸಿಬ್ಬಂದಿಗೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಸಮವಸ್ತ್ರಗಳನ್ನು ಧರಿಸದಿರಲು ಸಂಸತ್ತಿನ ಭದ್ರತಾ ಸಿಬ್ಬಂದಿ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಸತ್ತಿನ ವಿಶೇಷ ಅಧಿವೇಶನವು ಸೆಪ್ಟೆಂಬರ್ 18ರಿಂದ 22ರ ವರೆಗೆ ನಡೆಯುತ್ತಿದೆ.
ಹೊಸ ಸಮವಸ್ತ್ರವು ಸಿಂಥೆಟಿಕ್‌ನದ್ದಾಗಿದ್ದು, ಶಾಖವನ್ನುಂಟುಮಾಡುತ್ತದೆ ಎಂದು ಭದ್ರತೆಗೆ ನಿಯೋಜನೆಗೊಂಡಿದ್ದ ಹಲವು ಸಿಬ್ಬಂದಿ ದೂರಿದ್ದಾರೆ. ಇದರ ಬೆನ್ನಲ್ಲೇ ಬುಧವಾರ ಬೆಳಿಗ್ಗೆ ನಡೆದ ಭದ್ರತಾ ವಿಭಾಗದ ತುರ್ತು ಸಭೆಯಲ್ಲಿ, ಹಳೇ ಸಮವಸ್ತ್ರವನ್ನೇ ಧರಿಸಲು ತೀರ್ಮಾನಿಸಲಾಗಿದೆ.
ಭದ್ರತಾ ವಿಭಾಗದ ಸಿಬ್ಬಂದಿಗೆ ನೀಲಿ ಸಫಾರಿ ಸ್ಯೂಟ್‌ಗಳಿಗೆ ಬದಲಾಗಿ, ಮಿಲಿಟರಿ ಮಾದರಿಯ ಸಮವಸ್ತ್ರಗಳನ್ನು ನೀಡಲಾಗಿತ್ತು. ಹಲವರು ಸಮವಸ್ತ್ರದ ಬಗ್ಗೆ ದೂರು ನೀಡಿದ್ದರಿಂದ ಮುಂದಿನ ಆದೇಶದವರೆಗೆ ಹಳೇ ಸಮವಸ್ತ್ರವನ್ನೇ ಧರಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.