ತಿರುವನಂತಪುರಂ: ಸರ್ಕಾರಿ ಕಚೇರಿಗಳಿಗೆ ಮಕ್ಕಳನ್ನು ಕರೆತರಬಾರದು ಎಂಬ ಹಳೆಯ ಆದೇಶವೊಂದು ವೈರಲ್ ಆಗಿದೆ. 2018ರಲ್ಲಿ ಹೊರಡಿಸಿರುವ ಆದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇತ್ತೀಚೆಗೆ ಮೇಯರ್ ಆರ್ಯ ರಾಜೇಂದ್ರನ್ ಅವರು ಕಚೇರಿಯಲ್ಲಿ ಮಗುವನ್ನೆತ್ತಿ ಕೆಲಸ ಮಾಡುತ್ತಿರುವ ಚಿತ್ರ ಗಮನ ಸೆಳೆದಿತ್ತು. ಇದಾದ ಬಳಿಕ ಹಳೆಯ ಆದೇಶವೇ ವೈರಲ್ ಆಗಿದೆ.
ಸರ್ಕಾರಿ ನೌಕರರು ಮಕ್ಕಳನ್ನು ಕಚೇರಿಗೆ ಕರೆತರಬಾರದು ಎಂದು ಹಳೆಯ ಆದೇಶದಲ್ಲಿ ಹೇಳಲಾಗಿದ್ದು, ಇದರಿಂದ ಸಮಯ ನಷ್ಟವಾಗುತ್ತದೆ ಎನ್ನಲಾಗಿತ್ತು. ಮಾನವ ಹಕ್ಕುಗಳ ಆಯೋಗದ ಶಿಫಾರಸಿನ ಮೇರೆಗೆ 2018ರಲ್ಲಿ ಆದೇಶ ಹೊರಡಿಸಲಾಗಿತ್ತು.
ಕಚೇರಿಗೆ ಬರುವುದರಿಂದ ಮಕ್ಕಳ ವೈಯಕ್ತಿಕ ಬೆಳವಣಿಗೆ ಕಳೆದು, ಕಚೇರಿಯ ಪರಿಕರಗಳು ದುರುಪಯೋಗವಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ. ಈ ನಿಯಮ ಉಲ್ಲಂಘಿಸುವ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.