ನವದೆಹಲಿ: ವೈವಾಹಿಕ ಅತ್ಯಾಚಾರ ವಿಷಯಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಅಕ್ಟೋಬರ್ ಮಧ್ಯದಲ್ಲಿ ಅರಂಭಿಸುವುದಾಗಿ ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ.
ನವದೆಹಲಿ: ವೈವಾಹಿಕ ಅತ್ಯಾಚಾರ ವಿಷಯಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಅಕ್ಟೋಬರ್ ಮಧ್ಯದಲ್ಲಿ ಅರಂಭಿಸುವುದಾಗಿ ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ.
ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠವು, ಈ ವಿಷಯಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ಆರಂಭಿಸಬೇಕು ಎಂಬ ವಕೀಲೆ ಕರುಣಾ ನಂದಿ ಅವರ ಮನವಿಯನ್ನು ಪರಿಗಣಿಸಿ, ಈ ನಿರ್ಧಾರ ಪ್ರಕಟಿಸಿತು.
'ಸಂವಿಧಾನ ಪೀಠದ ಮುಂದೆ ಹಲವು ಅರ್ಜಿಗಳ ವಿಚಾರಣೆ ನಡೆಯುತ್ತಿದೆ. ಈ ಅರ್ಜಿಗಳ ವಿಚಾರಣೆ ಪೂರ್ಣಗೊಂಡ ನಂತರ ವೈವಾಹಿಕ ಅತ್ಯಾಚಾರ ಕುರಿತ ಅರ್ಜಿಗಳನ್ನು ವಿಚಾರಣಾ ಪಟ್ಟಿಗೆ ಸೇರಿಸಲಾಗುವುದು' ಎಂದು ನ್ಯಾಯಪೀಠ ಹೇಳಿತು.
'ಈ ವಿಚಾರವಾಗಿ ವಾದ ಮಂಡನೆಗೆ ಎಷ್ಟು ದಿನಗಳು ಅಗತ್ಯ' ಎಂದು ಮೆಹ್ತಾ ಹಾಗೂ ಅರ್ಜಿದಾರರನ್ನು ನ್ಯಾಯಪೀಠ ಪ್ರಶ್ನಿಸಿತು.
'ಈ ವಿಷಯವು ಸಾಮಾಜಿಕವಾಗಿ ಪರಿಣಾಮ ಬೀರುವ ಕಾರಣ, ವಾದ ಮಂಡನೆಗೆ ನನಗೆ ಎರಡು ದಿನಗಳು ಬೇಕು' ಎಂದು ಮೆಹ್ತಾ ತಿಳಿಸಿದರೆ, ತಮಗೆ ಮೂರು ದಿನಗಳಷ್ಟು ಕಾಲಾವಕಾಶದ ಅಗತ್ಯ ಇದೆ ಎಂದು ಅರ್ಜಿದಾರರ ಪರ ವಕೀಲ ಹೇಳಿದರು.
'ಹಾಗಾದರೆ, ಅರ್ಜಿಗಳನ್ನು ಮುಂದಿನ ವರ್ಷ ಏಪ್ರಿಲ್‌ನ ವಿಚಾರಣಾ ಪಟ್ಟಿಗೆ ಸೇರಿಸಬೇಕಾಗುತ್ತದೆ' ಎಂದು ವ್ಯಂಗ್ಯಭರಿತ ಧಾಟಿಯಲ್ಲಿ ಹೇಳಿದ ಸಿಜೆಐ, ಅಕ್ಟೋಬರ್ ಮಧ್ಯದಲ್ಲಿ ವಿಚಾರಣೆಯ ಪಟ್ಟಿಗೆ ಸೇರಿಸಲಾಗುವುದು ಎಂದರು.