HEALTH TIPS

ಇಂಡಿಯಾ ಅಧಿಕೃತ ಹೆಸರು: ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿಡಿಟಿ ಆಚಾರಿ

              ವದೆಹಲಿ: 'ವಿಶ್ವಸಂಸ್ಥೆ ದಾಖಲೆಯಲ್ಲಿ 'ರಿಪಬ್ಲಿಕ್ ಆಫ್‌ ಇಂಡಿಯಾ' ಎಂದಿದೆ. ಇದನ್ನು 'ರಿಪಬ್ಲಿಕ್‌ ಆಫ್ ಭಾರತ್' ಎಂದು ಬದಲಿಸಲು ಸಂವಿಧಾನಕ್ಕೆ ತಿದ್ದುಪಡಿ ಅಗತ್ಯ. ಅಲ್ಲದೆ, ಸಂಬಂಧಿತ ರಾಷ್ಟ್ರಗಳಿಗೆ ಈ ಬಗ್ಗೆ ಮಾಹಿತಿ ಕಳುಹಿಸಬೇಕು' ಎಂದು ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿಡಿಟಿ ಆಚಾರಿ ಹೇಳುತ್ತಾರೆ.

             'ಹೆಸರಿನ ಬದಲಾವಣೆ ಯನ್ನು ಸಂವಿಧಾನಕ್ಕೆ ತಿದ್ದುಪಡಿ ಮೂಲಕವೇ ಮಾಡಬೇಕು. ಅದಾಗದಿದ್ದರೆ, ಹೆಸರು ಇಂಡಿಯಾ ಎಂದಷ್ಟೇ ಇರಲಿದೆ. ಸಂವಿಧಾನದ ವಿಧಿ 1ರಲ್ಲಿ ಭಾರತ ಮತ್ತು ಇಂಡಿಯಾ ಎರಡರ ಉಲ್ಲೇಖವಿರುವುದು ವಿಶ್ಲೇಷಣಾತ್ಮಕವಷ್ಟೇ. ಅದರರ್ಥ ಅದಲು-ಬದಲಾಗಿ ಎರಡನ್ನೂ ಬಳಸಬಹುದು ಎಂಬುದಲ್ಲ. ಹಾಗೇ ಮಾಡಿದರೆ ಅದು ಆತ್ಮಹತ್ಯಾ ಕ್ರಮವಾಗಲಿದೆ. ಒಂದು ದೇಶಕ್ಕೆ ಒಂದು ಹೆಸರಷ್ಟೇ ಇರಬೇಕು' ಎಂದು ಅವರು ಪ್ರತಿಪಾದಿಸುತ್ತಾರೆ.

                ಸಂವಿಧಾನದ ಹಿಂದಿ ಅವತರಣಿಕೆಯಲ್ಲಿಯೂ 'ಭಾರತ್‌.. ಅರ್ಥಾತ್‌ ಇಂಡಿಯಾ...' ಎಂದೇ ಉಲ್ಲೇಖವಾಗಿದೆ. ಇಂಡಿಯಾ ಎಂಬುದು ದೇಶದ ಅಧಿಕೃತ ಹೆಸರು. ಇದನ್ನು ಬದಲಿಸಲು ಸಂವಿಧಾನದ ತಿದ್ದುಪಡಿ ಅಗತ್ಯ. ಇದಕ್ಕಾಗಿ ಉಭಯ ಸದನಗಳಲ್ಲಿಯೂ ಮೂರನೇ ಎರಡರಷ್ಟು ಸದಸ್ಯರ ಬೆಂಬಲ ಬೇಕು' ಎಂದು ಹೇಳುತ್ತಾರೆ.

              ಹೀಗೆ ಹೆಸರು ಬದಲಿಸುವುದರಿಂದ ಸಂವಿಧಾನದ ಮೂಲ ಸ್ವರೂಪ ಬದಲಾಗುವುದಿಲ್ಲ ಎಂದು ಆಚಾರಿ ಅವರು ಪ್ರತಿಪಾದಿಸುತ್ತಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries