HEALTH TIPS

ವಿಶ್ವದ ಅತಿದೊಡ್ಡ ಇಂಟರ್ನ್ಯಾಷನಲ್ ಕನ್ವೆನ್ಷನ್‌ ಸೆಂಟರ್​ ಉದ್ಘಾಟಿಸಿದ ಪ್ರಧಾನಿ ಮೋದಿ: ಇದರ ವಿಶೇಷತೆಗಳೇನು?

              ವದೆಹಲಿ: ಪ್ರಧಾನಿ ಮೋದಿ ಅವರು ತಮ್ಮ 73ನೇ ಹುಟ್ಟುಹಬ್ಬದಂದು ದೆಹಲಿಯ ದ್ವಾರಕದಲ್ಲಿರುವ ಯಶೋಭೂಮಿ ಇಂಟರ್ನ್ಯಾಷನಲ್​​​ ಕನ್ವೆನ್ಷನ್​ ಆಯಂಡ್​ ಎಕ್ಸ್​ಪೋ ಸೆಂಟರ್​ (ಐಐಸಿಸಿ)ನ ಮೊದಲ ಹಂತವನ್ನು ಉದ್ಘಾಟಿಸಿದರು. ಈ ವೇಳೆ ಭಾರತ್​ ಮಾತಾಕಿ ಜೈ ಎಂಬ ದೇಶ ಪ್ರೇಮದ ಘೋಷಣೆಗಳು ಮೊಳಗಿದವು.

              ಉದ್ಘಾಟನೆಗೂ ಮುನ್ನ ಐಐಸಿಸಿಗೆ ತೆರಳಲು ಪ್ರಧಾನಿ ಮೋದಿ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಿದರು. ಈ ವೇಳೆ ಮೆಟ್ರೋ ಪ್ರಯಾಣಿಕರ ಜತೆ ಪ್ರಧಾನಿ ಮೋದಿ ಉಭಯ ಕುಶಲೋಪರಿ ನಡೆಸಿದರು.

               ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ದ್ವಾರಕ ಸೆಕ್ಟರ್​ 21ರಿಂದ ಯಶೋಭೂಮಿ ದ್ವಾರಕ ಸೆಕ್ಟರ್​ 25ರವರೆಗೆ ಹೊಸ ದೆಹಲಿ ಏರ್​​ಪೋರ್ಟ್​ ಮೆಟ್ರೋ ಎಕ್ಸ್​ಪ್ರೆಸ್​ ಲೈನ್​ ವಿಸ್ತರಣೆಯನ್ನೂ ಉದ್ಘಾಟಿಸಿದರು. ದ್ವಾರಕಾ ಸೆಕ್ಟರ್ 25ರಲ್ಲಿ ಹೊಸ ಮೆಟ್ರೋ ನಿಲ್ದಾಣದ ಉದ್ಘಾಟನೆಯೊಂದಿಗೆ ಯಶೋಭೂಮಿ ದೆಹಲಿ ಏರ್‌ಪೋರ್ಟ್ ಮೆಟ್ರೋ ಎಕ್ಸ್‌ಪ್ರೆಸ್ ಲೈನ್‌ಗೆ ಸಂಪರ್ಕ ಕಲ್ಪಿಸುತ್ತದೆ.

                                         ಯಶೋಭೂಮಿ ವಿಶೇಷತೆಗಳೇನು?

                ಯಶೋಭೂಮಿಯು 8.9 ಲಕ್ಷ ಚದರ ಮೀಟರ್‌ಗಿಂತಲೂ ಹೆಚ್ಚು ಯೋಜನಾ ಪ್ರದೇಶವನ್ನು ಹೊಂದಿದೆ. ಅದರಲ್ಲಿ 1.8 ಲಕ್ಷ ಚದರ ಮೀಟರ್‌ಗಿಂತ ಹೆಚ್ಚಿನ ಕಟ್ಟಡ ನಿರ್ಮಾಣ ಪ್ರದೇಶದೊಂದಿಗೆ ವಿಶ್ವದ ಅತಿದೊಡ್ಡ MICE (ಸಭೆಗಳು, ಇನ್ಸೆಂಟಿವ್ಸ್​ ಸಮ್ಮೇಳನಗಳು ಮತ್ತು ಪ್ರದರ್ಶನಗಳು) ಸೌಲಭ್ಯಗಳನ್ನು ಹೊಂದಿದೆ. 73,000 ಚದರ ಮೀಟರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ನಿರ್ಮಿಸಲಾದ ಕನ್ವೆನ್ಷನ್ ಸೆಂಟರ್, ಮುಖ್ಯ ಸಭಾಂಗಣ, ಬಾಲ್ ರೂಂ ಮತ್ತು 11,000 ಪ್ರತಿನಿಧಿಗಳನ್ನು ಹಿಡಿದಿಟ್ಟುಕೊಳ್ಳುವ ಒಟ್ಟು ಸಾಮರ್ಥ್ಯದ 13 ಸಭಾ ಕೊಠಡಿಗಳನ್ನು ಒಳಗೊಂಡಂತೆ 15 ಕನ್ವೆನ್ಷನ್ ಕೊಠಡಿಗಳನ್ನು ಒಳಗೊಂಡಿದೆ.

             ಈ ಸೌಲಭ್ಯಗಳ ಜೊತೆಗೆ ಯಶೋಭೂಮಿಯು 1.07 ಲಕ್ಷ ಚದರ ಮೀಟರ್‌ಗಳಷ್ಟು ವ್ಯಾಪಿಸಿರುವ ವಿಶ್ವದ ಅತಿದೊಡ್ಡ ಪ್ರದರ್ಶನ ಸಭಾಂಗಣವನ್ನೂ ಹೊಂದಿದೆ. ಈ ಸಭಾಂಗಣ ಭವ್ಯವಾದ ಫೋಯರ್ ಜಾಗಕ್ಕೆ ಸಂಪರ್ಕ ಹೊಂದಿದ್ದು, ಇಲ್ಲಿ, ವಸ್ತು ಪ್ರದರ್ಶನಗಳು, ವ್ಯಾಪಾರ ಮೇಳಗಳು ಮತ್ತು ವ್ಯಾಪಾರ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಫೋಯರ್ ಮಾಧ್ಯಮ ಕೊಠಡಿಗಳು, ವಿವಿಐಪಿ ಲಾಂಜ್‌ಗಳು, ಕ್ಲೋಕ್ ಸೌಲಭ್ಯಗಳು, ಸಂದರ್ಶಕರ ಮಾಹಿತಿ ಕೇಂದ್ರ ಮತ್ತು ಟಿಕೆಟಿಂಗ್ ಕೌಂಟರ್‌ಗಳಂತಹ ಬಹು ಬೆಂಬಲ ಪ್ರದೇಶಗಳನ್ನು ಈ ಕೇಂದ್ರ ಹೊಂದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries