HEALTH TIPS

ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಒತ್ತು: ಸೇನಾ ಮುಖ್ಯಸ್ಥ

              ವದೆಹಲಿ: 'ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆ, ವಿವಾದಗಳನ್ನು ಶಾಂತಿಯುತ ಮಾರ್ಗದಲ್ಲಿ ಬಗೆಹರಿಸಿಕೊಳ್ಳುವುದು ಹಾಗೂ ಸೇನೆ ಬಳಕೆ ತಡೆಯುವುವಂಥ ಕ್ರಮಗಳಿಗೆ ಹಚ್ಚಿನ ಒತ್ತು ನೀಡುವುದು ಇಂಡೊ- ಪೆಸಿಫಿಕ್‌ ಕಾರ್ಯತಂತ್ರದ ಕುರಿತು ಭಾರತ ಹೊಂದಿರುವ ದೃಷ್ಟಿಕೋನವಾಗಿದೆ' ಎಂದು ಭಾರತೀಯ ಸೇನೆ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ ಅವರು ಮಂಗಳವಾರ ಹೇಳಿದರು.

              ಭಾರತ ಆತಿಥ್ಯ ವಹಿಸಿರುವ 13ನೇ ಇಂಡೊ- ಪೆಸಿಫಿಕ್‌ ಸೇನಾ ಮುಖ್ಯಸ್ಥರ ಸಮಾವೇಶದ (ಐಪಿಎಸಿಸಿ) ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಂಡೆ ಹೀಗೆ ಹೇಳಿದರು. ಇಂಡೊ- ಪೆಸಿಫಿಕ್‌ (ಹಿಂದೂ ಮಹಾಸಾಗರ- ಪೆಸಿಫಿಕ್‌ ಸಾಗರ) ಪ್ರದೇಶದಲ್ಲಿ ಚೀನಾ ಸೇನೆಯ ಬಲಪ್ರದರ್ಶನ ಹೆಚ್ಚಾಗುತ್ತಿರುವ ಮತ್ತು ಭಾರತದ ಲಡಾಕ್‌ನ ಪೂರ್ವ ಗಡಿಯಲ್ಲಿ ಚೀನಾದ ಉಪಟಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರು ಹೀಗೆ ಹೇಳಿದರು.

                 'ನಾವು ಎದುರಿಸುತ್ತಿರುವ ಸವಾಲುಗಳು ಗಮನಾರ್ಹವಾಗಿವೆ. ಬಹಿರಂಗ ಚರ್ಚೆ ಮತ್ತು ಅಭಿಪ್ರಾಯ ವಿನಿಮಯ ಮೂಲಕ ಸವಾಲುಗಳಿಗೆ ನವೀನ ಮಾದರಿಯ ಪರಿಹಾರಗಳನ್ನು ಕಂಡುಕೊಳ್ಳೋಣ' ಎಂದು ಅವರು ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದರು.

               'ನಮ್ಮ ಉದ್ದೇಶಗಳನ್ನು ಸಾಧಿಸುವಲ್ಲಿ ನಮ್ಮ ಮಾರ್ಗ, ವಿಧಾನಗಳು ಬೇರೆ ಇರಬಹುದು. ಆದರೆ ನಮ್ಮ ಗುರಿ ಮಾತ್ರ ಒಂದೇ ಆಗಿದೆ. ಆ ಗುರಿಯು ಉದಾರ ಮತ್ತು ಮುಕ್ತ ಇಂಡೊ- ಪೆಸಿಫಿಕ್‌ ಆಗಿದೆ' ಎಂದರು.

                 ಇಂಡೊ- ಪೆಸಿಫಿಕ್ ದೇಶಗಳ ಭೂ-ರಾಜಕೀಯ ಮತ್ತು ಭೂ- ಆರ್ಥಿಕ ಮಹತ್ವದ ಕುರಿತು ಮಾತನಾಡಿದ ಅವರು, ವಿಶ್ವದ ಜನಸಂಖ್ಯೆಯಲ್ಲಿ ಶೇ 65 ಜನಸಂಖ್ಯೆಯನ್ನು ಈ ಪ್ರದೇಶ ಹೊಂದಿದೆ. ಜಾಗತಿಕ ಜಿಡಿಪಿಯಲ್ಲಿ ಶೇ 63 ಜಿಡಿಪಿ ಇಲ್ಲಿ ಉತ್ಪಾದನೆ ಆಗುತ್ತದೆ ಮತ್ತು ಜಾಗತಿಕ ವಾಣಿಜ್ಯ ಸರಕು ಸಾಗಾಣೆಯ ಶೇ 50 ಈ ಪ್ರದೇಶದ ಕರಾವಳಿ ಮೂಲಕ ನಡೆಯುತ್ತದೆ. ಹಾಗಾಗಿ, ಈ ಪ್ರದೇಶ ಹೊಂದಿರುವ ಭೌಗೋಳಿಕ ಮತ್ತು ಆರ್ಥಿಕ ಪ್ರಭಾವವು ಸಹಜವಾಗಿ ಇತರ ಜಾಗತಿಕ ಕಾರ್ಯತಂತ್ರಗಳಿಗೆ ದೊಡ್ಡ ಬೆದರಿಕೆಯಾಗಿದೆ ಎಂದರು.

              'ಇಂಡೋ- ಪೆಸಿಫಿಕ್‌ನ ಎಲ್ಲಾ ಸದಸ್ಯ ದೇಶಗಳೂ ಈ ಕಾರ್ಯತಂತ್ರದಲ್ಲಿ ಸಕಾರಾತ್ಮಕವಾಗಿ ತೊಡಗುವಂತೆ ಮಾಡುವ ಭಾರತದ ಬದ್ಧತೆಯು ಬದಲಾಗುವುದಿಲ್ಲ' ಎಂದು ಪಾಂಡೆ ಅವರು ಭರವಸೆ ನೀಡಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries