ಕುಂಬಳೆ: ಸಾರ್ವರ್ಕರ್ ಫ್ರೆಂಡ್ಸ್ ಸರ್ಕಲ್ ಮಂಡೆಕಾಪು ವತಿಯಿಂದ ಪ್ರಥಮ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯು ಭಾನುವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಕೊರಗಜ್ಜ ಸೇವಾ ಸಮಿತಿಯ ಅಧ್ಯಕ್ಷ ಉಮಾನಾಥ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಣ್ಣೂರು ವಿಭಾಗದ ಸಹಕಾರ್ಯವಾಹ ಲೋಕೇಶ್ ಜೋಡುಕಲ್ಲು ಹಾಗೂ ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ಸಂಚಾಲಕ ಸತೀಶ್ ಕಾಪು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಾರ್ವರ್ಕರ್ ಫ್ರೆಂಡ್ಸ್ ಸರ್ಕಲ್‍ನ ಅಧ್ಯಕ್ಷ ಸುಂದರ ಸ್ವಾಗತಿಸಿ, ಕಾರ್ಯದರ್ಶಿ ಯೋಗೀಶ್ ಮಂಡೆಕಾಪು ವಂದಿಸಿದರು.