ಲಖನೌ: ಉತ್ತರ ಪ್ರದೇಶದ ಮೀರತ್‌ನಲ್ಲಿರುವ ಚೌಧರಿ ಚರಣ್ ಸಿಂಗ್ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳಿಗೆ ತರಬೇತಿ ನೀಡಲು ತಂತ್ರಜ್ಞಾನ ಆಧಾರಿತ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಆರಂಭಿಸಲಾಗಿದೆ.
ಲಖನೌ: ಉತ್ತರ ಪ್ರದೇಶದ ಮೀರತ್‌ನಲ್ಲಿರುವ ಚೌಧರಿ ಚರಣ್ ಸಿಂಗ್ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳಿಗೆ ತರಬೇತಿ ನೀಡಲು ತಂತ್ರಜ್ಞಾನ ಆಧಾರಿತ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಆರಂಭಿಸಲಾಗಿದೆ.
ಉತ್ತರ ಪ್ರದೇಶ ಕಾರಾಗೃಹ ವಿಭಾಗದ ಡಿಜಿಪಿ ಸತ್ಯ ನಾರಾಯಣ್ ಸಾಬತ್, ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಅಳವಡಿಸಿಕೊಳ್ಳುವಂತೆ ರಾಜ್ಯದ ಎಲ್ಲ ಜಿಲ್ಲಾ ಕಾರಾಗೃಹಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ.
'ಈವರೆಗೆ ಹಲವು ಜೈಲುಗಳಲ್ಲಿ ಈ ವ್ಯವಸ್ಥೆ ಅನುಸರಿಸಲಾಗುತ್ತಿದೆ ಅಥವಾ ಅಳವಡಿಸಿಕೊಳ್ಳಲಾಗುತ್ತಿದೆ. ಕಾರಾಗೃಹವು ದೊಡ್ಡ ಕಾಲೇಜು ಇದ್ದಂತೆ. ಇಲ್ಲಿ ಎಲ್ಲ ಕೈದಿಗಳಿಗೂ ಕಲಿಸಬಹುದು. ಆದರೆ, ಪ್ರಾಯೋಗಿಕ ವಾತಾವರಣ ಇಲ್ಲದಿದ್ದರೆ ತರಬೇತಿ ನೀಡುವುದು ಅಸಾಧ್ಯ. ಇದೀಗ ಸ್ಮಾರ್ಟ್ ಬೋರ್ಡ್‌ಗಳ ಸಹಾಯದಿಂದ, ಯಾವುದೇ ವಿಷಯವನ್ನು ಕಣ್ಣಿಗೆ ಕಟ್ಟುವಂತೆ ಬೋಧಿಸಲು ಸಾಧ್ಯವಾಗಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಜೈಲುಗಳಲ್ಲಿ ಹಲವು ಕೌಶಲಾಭಿವೃದ್ಧಿ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತಿದೆ. ಮರಗೆಲಸ ಸೇರಿದಂತೆ ಹಲವು ರೀತಿಯ ತರಬೇತಿ ನೀಡಲಾಗುತ್ತಿದೆ.
'ಇನ್ನಷ್ಟು ಸ್ಮಾರ್ಟ್ ಬೋರ್ಡ್‌ಗಳೊಂದಿಗೆ ಕಾರ್ಯಕ್ರಮವನ್ನು ವಿಸ್ತರಿಸುವ ಯೋಜನೆ ನಡೆಯುತ್ತಿದೆ. ಕೈದಿಗಳಿಗೆ ತರಬೇತಿ ನೀಡಲು ಸದ್ಯ ಡೌನ್‌ಲೋಡ್ ಮಾಡಲಾದ ವಿಡಿಯೊಗಳನ್ನು ಬಳಸಲಾಗುತ್ತಿದೆ. ಕೈದಿಗಳೇ ಅವುಗಳನ್ನು ಬಳಸುತ್ತಾರೆ. ವಿದ್ಯಾವಂತ ಕೈದಿಗಳು ಅನಕ್ಷರಸ್ಥ ಕೈದಿಗಳಿಗೆ ಹೇಳಿಕೊಡುತ್ತಾರೆ' ಎಂದೂ ಹೇಳಿದ್ದಾರೆ.