ಮಂಜೇಶ್ವರ: ಚಿಗುರುಪಾದೆ ಶ್ರೀಮಹಾಲಿಂಗೇಶ್ವರ ದೇವಸ್ಥಾನ ಚಿಗುರುಪಾದೆ ಕ್ಷೇತ್ರದಲ್ಲಿ ಸಿಂಹ ಮಾಸದ ನಿಮಿತ್ತ ನಡೆಯುತ್ತಿರುವ ಶನಿವಾರ ಬಲಿವಾಡುಕೂಟ ಸಂದರ್ಭ ಜರಗಿದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಪ್ರಸಿದ್ಧಕಲಾವಿದರಿಂದ ಯಕ್ಷಗಾನ ತಾಳಮದ್ದಳೆ “ಶ್ರೀರಾಮ ದರ್ಶನ” ಇತ್ತೀಚೆಗೆ ಮನೋಜ್ಞವಾಗಿ ನಡೆದು ಜನಮನ ರಂಜಿಸಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಮಹೇಶ್ ಕನ್ಯಾಡಿ, ಚೆಂಡೆಮದ್ದಳೆಯಲ್ಲಿ ಶಿತಿಕಂಠ ಭಟ್ ಉಜಿರೆ ಹಾಗೂ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಚಕ್ರತಾಳದಲ್ಲಿ ಗೌತಮ ನಾವಡ ಮಜಿಬೈಲು ಪಾಲ್ಗೊಂಡಿದ್ದರು. ಅರ್ಥಧಾರಿಗಳಾಗಿ ಸರ್ಪಂಗಳ ಈಶ್ವರ ಭಟ್(ಹನುಮಂತ), ರಾಧಾಕೃಷ್ಣ ಕಲ್ಚಾರ್(ಅರ್ಜುನ), ದಿನೇಶ ಶೆಟ್ಟಿ ಕಾವಳಕಟ್ಟೆ(ವೃದ್ಧಬ್ರಾಹ್ಮಣ ಹಾಗೂ ಶ್ರೀರಾಮ) ಭಾಗವಹಿಸಿದ್ದರು. ಗುರುರಾಜ ಹೊಳ್ಳ ಬಾಯಾರು ತಾಳಮದ್ದಳೆ ಸಂಯೋಜಿಸಿದ್ದರು.