ಕುಂಬಳೆ: ಗ್ರಾಮ ಭೇಟಿ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಬಾಡೂರು ಗ್ರಾಮ ಕಚೇರಿಗೆ ಭೇಟಿ ನೀಡಿದರು. ಲೈಫ್ ಮಿಷನ್, ಭೂದಾಖಲೆ, ಬಿಪಿಎಲ್ ಕಾರ್ಡ್, ಬೀದಿನಾಯಿಗಳ ಕಿರುಕುಳ, ತೂಗು ಸೇತುವೆ ಮುಂತಾದ ವಿವಿಧ ಸಮಸ್ಯೆಗಳ ಕುರಿತು ನಲವತ್ತೊಂದು ದೂರುಗಳನ್ನು ಜಿಲ್ಲಾಧಿಕಾರಿ ಸ್ವೀಕರಿಸಿದರು. ಅರ್ಜಿದಾರರ ಅಹವಾಲುಗಳನ್ನು ನೇರವಾಗಿ ಆಲಿಸಿದ ಜಿಲ್ಲಾಧಿಕಾರಿಗಳು ದೂರುಗಳ ಬಗ್ಗೆ ಕೂಡಲೇ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಪುತ್ತಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಸುಬ್ಬಣ್ಣ ಆಳ್ವ, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಅನಿಲ್ ಕುಮಾರ್, ಪುತ್ತಿಗೆ ಗ್ರಾಮ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಮಜೀದ್, ಅನಿತಾ, ವಾರ್ಡ್ ಸದಸ್ಯರಾದ ಶಾಂತಿ, ಪ್ರೇಮಾ, ಗಂಗಾಧರ, ಗ್ರಾಮಾಧಿಕಾರಿ ಎಸ್.ಇಬ್ರಾಹಿಂ, ಗ್ರಾಮ ಸಹಾಯಕ ಎಂ.ಶಾಫಿ, ಗ್ರಾಮ ಕ್ಷೇತ್ರ ಸಹಾಯಕರಾದ ಓ.ಜಾಕೀರ್ ಹುಸೈನ್, ಎ.ಬೇಬಿ ಈ ಸಂದರ್ಭ ಉಪಸ್ಥಿತರಿದ್ದರು.