ಕುಂಬಳೆ: ಪೆÇಲೀಸರನ್ನು ಕಂಡು ಪರಾರಿಯಾಗುವ ಯತ್ನದಲ್ಲಿದ್ದ ಕಾರು ಪಲ್ಟಿಯಾಗಿ ಬಾಲಕ ಮೃತಪಟ್ಟ ಪ್ರಕರಣದ ತನಿಖೆ ನಡೆಸುತ್ತಿರುವ ಕ್ರೈಂ ಬ್ರಾಂಚ್ ಅಧಿಕಾರಿಗಳ ತಂಡ ಕಾರು ಅಪಘಾತಕ್ಕೀಡಾದ ಕಳತ್ತೂರಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು. ಪ್ರಾಥಮಿಕ ಪರಿಶೀಲನಾ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಕಾರಣರಗಿದ್ದರೆನ್ನಲಾದ ಎಸ್.ಐ ಸೇರಿದಂತೆ ಮೂರು ಮಂದಿ ಪೊಲೀಸರನ್ನು ಕಾಞಂಗಾಡಿಗೆ ವರ್ಗಾಯಿಸಲಾಗಿದೆ. ಕಾರು ಪಲ್ಟಿಯಾಗಿ ಅಂಗಡಿಮೊಗರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿ ಪೆರಾಲ್‍ಕಣ್ಣೂರು ನಿವಾಸಿ ದಿ. ಅಬ್ದುಲ್ಲ-ಸಫಿಯಾ ದಂಪತಿ ಪುತ್ರ ಫರಾಸ್(17)ಸಾವಿಗೀಡಾಗಿದ್ದನು.
ಆರೋಪ ಎದುರಿಸುತ್ತಿರುವ ಕುಂಬಳೆ ಠಾಣೆ ಎಸ್.ಐ ಮನೆಗೆ ಅಪರಿಚಿತ ತಂಡವೊಂದು ಬೈಕಲ್ಲಿ ತೆರಳಿ ಅವರ ಕುಟುಂಬಕ್ಕೆ ಜೀವ ಬೆದರಿಕೆಯೊಡ್ಡಿದ ಗಟನೆಯೂ ನಡೆದಿತ್ತು.