ಕರ್ನಾಲ್: ವಾಯುಮಾಲಿನ್ಯವನ್ನು ತಡೆಯುವ ಉದ್ದೇಶದಿಂದ ಕಾರ್-ಮುಕ್ತ ದಿನವನ್ನು ಉತ್ತೇಜಿಸುವ ಪ್ರಯತ್ನದಲ್ಲಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ರಾಯಲ್ ಎನ್‌ಫೀಲ್ಡ್ ಬೈಕ್ ಮೂಲಕ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಾರ್ ಫ್ರೀ ಡೇ ಎಂದು ಸೆ. 2ರಂದು ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ಘೋಷಿಸಿದ್ದರು. ಅದರ ಅನ್ವಯ ಪ್ರತಿ ಮಂಗಳವಾರದಂದು ಕಾರುಗಳನ್ನು ಬಳಸದಂತೆ ಕರ್ನಾಲ್‌ನಲ್ಲಿರುವ ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ತಿಳಿಸಿ, ಸ್ವತಃ ಕಾರು ಬಿಟ್ಟು ಸಂಚರಿಸಲು ವಿನೂತನ ಪ್ರಯತ್ನ ನಡೆಸಿದ್ದಾರೆ.
'ಕಾರ್-ಮುಕ್ತ ದಿನ' ಅಥವಾ 'ವ್ಯಸನ ಮುಕ್ತ ಹರಿಯಾಣ', ಸಾರ್ವಜನಿಕ ಬೆಂಬಲವಿಲ್ಲದೆ ಯಾವುದೇ ಗುರಿಯನ್ನು ತಲುಪಲು ಸಾಧ್ಯವಿಲ್ಲ. 'ಕಾರ್-ಮುಕ್ತ ದಿನ' ದಲ್ಲಿ ನಾನು ವಿಮಾನ ನಿಲ್ದಾಣಕ್ಕೆ ಬೈಕ್‌ನಲ್ಲಿ ಪ್ರಯಾಣಿಸುವ ಮೂಲಕ, ನಾನು ಟ್ರಾಫಿಕನ್ನು ಕಡಿಮೆ ಮಾಡಲು ಸ್ವಲ್ಪ ಪ್ರಯತ್ನ ಮಾಡಿದೆ. ವಾರದಲ್ಲಿ ಕೇವಲ ಒಂದು ದಿನ ಕಾರುಗಳನ್ನು ತ್ಯಜಿಸಲು ಜನರನ್ನು ಪ್ರೋತ್ಸಾಹಿಸುತ್ತಾರೆ ಎಂದು ನಾನು ಭಾವಿಸುತ್ತೇನೆ' ಎಂದು ಮುಖ್ಯಮಂತ್ರಿ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಡಿಯೋದಲ್ಲಿ ಏನಿದೆ?: ಮುಖ್ಯಮಂತ್ರಿಗಳು ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲಿ ಬುಲೆಟ್ ಸವಾರಿ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಜತೆಗೆ ಭದ್ರತಾ ಸಿಬ್ಬಂದಿಯೂ ಸಹ ಬೈಕ್‌ಗಳಲ್ಲಿ ಬಂದರು. ಮುಖ್ಯಮಂತ್ರಿ ಪ್ರಯಾಣಕ್ಕಾಗಿ ರಸ್ತೆಯಲ್ಲಿ ಇತರ ವಾಹನಗಳಿಗೆ ನಿರ್ಬಂಧ ಹೇರಲಾಗಿತ್ತು.