HEALTH TIPS

ಮುಂಬೈ ಸರಣಿ ಬಾಂಬ್‌ ಸ್ಫೋಟ: ಎಸ್‌ಪಿಪಿ ನೇಮಿಸದ ಸರ್ಕಾರ

               ಮುಂಬೈ: 2006ರಲ್ಲಿ ನಡೆದಿದ್ದ ಮುಂಬೈ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿರುದ್ಧ ಸರ್ಕಾರವನ್ನು ಪ್ರತಿನಿಧಿಸಲು ಸರ್ಕಾರ ಪರ ವಿಶೇಷ ವಕೀಲರನ್ನು (ಎಸ್‌ಪಿಪಿ) ನೇಮಿಸದಿರುವ ಕುರಿತು ಬಾಂಬೆ ಹೈಕೋರ್ಟ್‌ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬುಧವಾರ ಹರಿಹಾಯ್ದಿದೆ.

             ಸರ್ಕಾರವು ಈ ಮೊಕದ್ದಮೆಯನ್ನು ಗಂಭೀರವಾಗಿ ನಡೆಸುತ್ತಿಲ್ಲ ಎಂದು ನ್ಯಾಯಮೂರ್ತಿಗಳಾದ ನಿತಿನ್‌ ಸಾಂಬ್ರೆ ಮತ್ತು ರಾಜೇಶ್‌ ಪಾಟೀಲ್‌ ಅವರಿದ್ದ ವಿಭಾಗೀಯ ಪೀಠವು ಅಸಮಾಧಾನ ವ್ಯಕ್ತಪಡಿಸಿದೆ.

                ಈ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣಾ ನ್ಯಾಯಾಲಯವು ಐವರು ಆರೋಪಿಗಳಿಗೆ 2015ರಲ್ಲಿ ಮರಣ ದಂಡನೆ ವಿಧಿಸಿ ಆದೇಶ ನೀಡಿತ್ತು. ಈ ಆದೇಶದ ದೃಢೀಕರಣ ಮತ್ತು ಆರೋಪಿಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯು ಹೈಕೋರ್ಟ್‌ನಲ್ಲಿ ಇನ್ನಷ್ಟೇ ಆರಂಭವಾಗಬೇಕಿದೆ. ಅರ್ಜಿಗಳ ವಿಚಾರಣೆಯು ಬುಧವಾರ ಆರಂಭವಾದ ಬಳಿಕ ಸರ್ಕಾರವು ಎಸ್‌ಪಿಪಿಯನ್ನು ನೇಮಿಸಿಲ್ಲ ಎಂದು ಹೈಕೋರ್ಟ್‌ಗೆ ತಿಳಿಸಲಾಯಿತು.

                 2006ರ ಜುಲೈ 11ರಂದು ಮುಂಬೈ ಸ್ಥಳೀಯ ರೈಲುಗಳಲ್ಲಿ ಸರಣಿ ಸ್ಫೋಟ ನಡೆಸಲಾಗಿತ್ತು. ಈ ವೇಳೆ 180ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries