ಕಾಸರಗೋಡು: ಕೇರಳ ನಾಲೆಡ್ಜ್ ಎಕನಾಮಿ ಮಿಷನ್ ಆಶ್ರಯದಲ್ಲಿ ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ (ಸಿ.ಐ.ಐ), ಕುಟುಂಬಶ್ರೀ, ಅಸಾಪ್ ಕೇರಳ ಎಂಬಿವುಗಳ ಸಹಕಾರದೊಂದಿಗೆ ಪ್ರತ್ಯೇಕ ಉದ್ಯೋಗ ಮೇಳ ಸೆಪ್ಟೆಂಬರ್ 23 ರಂದು ಕಾಸರಗೋಡು ವಿದ್ಯಾನಗರ ಅಸಾಪ್ ಕಮ್ಯೂನಿಟಿ ಸ್ಕಿಲ್ ಪಾರ್ಕ್ ನಲ್ಲಿ ನಡೆಯಲಿದೆ.
ಬಿ.ಟೆಕ್, ಐ.ಟಿ.ಐ., ಡಿಪೆÇ್ಲಮಾ ಅರ್ಹತೆಯಿರುವ ಉದ್ಯೋಗಾಕಾಂಕ್ಷಿಗಳಿಗಾಗಿ ಪ್ರತ್ಯೇಕ ಉದ್ಯೋಗ ಮೇಳ ಆಯೋಜಿಸಲಾಗಿದೆ. ಭಾಗವಹಿಸಲು ಇಚ್ಛಿಸುವವರು ಡಿ.ಡಬ್ಲ್ಯು.ಎಂ.ಎಸ್ ಆಪ್‍ನಲ್ಲಿ ನೋಂದಾಯಿಸಿ ಅಂದು ಬೆಳಗ್ಗೆ ಒಂಬತ್ತು ಗಂಟೆಗೆ ಕಮ್ಯುನಿಟಿ ಸ್ಕಿಲ್ ಪಾರ್ಕ್‍ಗೆ ತಲುಪಬೇಕು. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಕಂಪನಿಗಳ ಕುರಿತು ಮತ್ತು ಉದ್ಯೋಗಾವಕಾಶಗಳ ಕುರಿತು ವಿವರವಾದ ಮಾಹಿತಿ ಡಿ.ಡಬ್ಲ್ಯು.ಎಮ್.ಎಸ್ ಕನೆಕ್ಟ್ ಆಪ್ ನಲ್ಲಿ ಲಭ್ಯವಿರಲಿದೆ. ಡಿ.ಡಬ್ಲ್ಯು.ಎಮ್.ಎಸ್ ನಲ್ಲಿ ನೋಂದಾಯಿಸಲು ಸಾಧ್ಯವಾಗದವರು ಸ್ಮಾರ್ಟ್‍ಫೆÇೀನ್‍ನೊಂದಿಗೆ ತಲುಪಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9567815040, 85474 53953 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.