HEALTH TIPS

ಹಳೇ ಸಂಸತ್ ಭವನಕ್ಕೆ ವಿದಾಯ: ಪ್ರಧಾನಿ ಮೋದಿ ಸೇರಿ ಲೋಕಸಭಾ, ರಾಜ್ಯಸಭಾ ಸದಸ್ಯರ ಗ್ರೂಪ್​ ಫೋಟೋ

             ನವದೆಹಲಿ: ಹಳೇ ಸಂಸತ್ ಭವನದಿಂದ ಕಲಾಪಗಳು ಹೊಸ ಸಂಸತ್ ಕಟ್ಟಡಕ್ಕೆ ಮಂಗಳವಾರ ಸ್ಥಳಾಂತರಗೊಂಡಿದ್ದು, ಇದಕ್ಕೂ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ, ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು ಒಟ್ಟಾಗಿ ಗ್ರೂಪ್ ಫೋಟೋ ತೆಗೆಸಿಕೊಂಡರು.

            ಉಪರಾಷ್ಟ್ರಪತಿ, ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರ ಎರಡೂ ಬದಿಗಳಲ್ಲಿ ನಿಂತು ಸದಸ್ಯರೊಂದಿಗೆ ಫೋಟೋಗೆ ಪೋಸ್ ಕೊಟ್ಟರು.

              ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ಅಧೀರ್ ರಂಜನ್ ಚೌಧರಿ, ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಲೋಕಸಭೆಯ ಸಮಾಜವಾದಿ ಪಕ್ಷದ ಸದಸ್ಯ 93 ವರ್ಷದ ಶಫೀಕ್ ಉರ್​ ರಹಮಾನ್ ಬಾರ್ಕ್​ ಮತ್ತು ಹಿರಿಯ ಸದಸ್ಯರಾದ ಎನ್‌ಸಿಪಿಯ ವರಿಷ್ಠ ಶರದ್ ಪವಾರ್, ನ್ಯಾಷನಲ್ ಕಾನ್ಫೆರನ್ಸ್​ನ ಫಾರೂಕ್ ಅಬ್ದುಲ್ಲಾ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮೊದಲ ಸಾಲಿನಲ್ಲಿ ಕುಳಿತಿದ್ದರು.

             ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮನೀಷ್ ತಿವಾರಿ ಅವರೊಂದಿಗೆ ಎರಡನೇ ಸಾಲಿನಲ್ಲಿ ನಿಂತಿದ್ದರು. ಉಭಯ ಸದನಗಳ ಸದಸ್ಯರು ತಮ್ಮ ಛಾಯಾಚಿತ್ರಗಳನ್ನು ಕ್ಲಿಕ್ಕಿಸುತ್ತಿದ್ದಂತೆ ಕೆಲವು ಸದಸ್ಯರು ನೆಲದ ಮೇಲೆ ಕುಳಿತುಕೊಂಡಿರುವುದು ಕೂಡ ಕಂಡುಬಂದಿತು. ಎಲ್ಲರೊಂದಿಗೆ ಗ್ರೂಪ್​​ ಫೋಟೋ ಬಳಿಕ ರಾಜ್ಯಸಭಾ ಸದಸ್ಯರ ತಮ್ಮದೇ ಪ್ರತ್ಯೇಕ ಗ್ರೂಪ್ ಫೋಟೋ​ ತೆಗೆದುಕೊಂಡರು. ಬಳಿಕ ಲೋಕಸಭಾ ಸದಸ್ಯರು ಪ್ರತ್ಯೇಕ ಫೋಟೋ ತೆಗೆಸಿಕೊಂಡರು.

             ಮಹಿಳಾ ಸದಸ್ಯರು ಬಣ್ಣ-ಬಣ್ಣದ ಸೀರೆಗಳು ತೊಟ್ಟು ಬಂದಿದ್ದರೆ, ಹೆಚ್ಚಿನ ಪುರುಷ ಸದಸ್ಯರು ಫೋಟೋ ಸೆಷನ್‌ಗಾಗಿ ಕೋಟ್‌ಗಳೊಂದಿಗೆ ಬಿಳಿ ಕುರ್ತಾ ಹಾಗೂ ಪೈಜಾಮಾಗಳನ್ನು ಧರಿಸಿದ್ದರು. ಈ ವೇಳೆ ಎಲ್ಲ ಸದಸ್ಯರು ಸಂಭ್ರಮದಲ್ಲಿ ಒಟ್ಟಿಗೆ ಸೇರಿದ್ದು ಕಂಡುಬಂದಿತು.

                                   ಪ್ರಜ್ಞೆ ತಪ್ಪಿ ಬಿದ್ದ ಸದಸ್ಯ

             ಫೋಟೋ ಸೆಷನ್​ ವೇಳೆ ಬಿಜೆಪಿ ರಾಜ್ಯಸಭಾ ಸದಸ್ಯ, 68 ವರ್ಷದ ನರಹರಿ ಅಮೀನ್ ಪ್ರಜ್ಞೆ ತಪ್ಪಿ ಬಿದ್ದ ಘಟನೆಯೂ ನಡೆಯಿತು.

               ಕೂಡಲೇ ಸಚಿವರಾದ ಅಮಿತ್ ಶಾ, ಪಿಯೂಷ್ ಗೋಯಲ್ ಮತ್ತು ಕೆಲವು ನಾಯಕರು ಅಮೀನ್ ಅವರ ರಕ್ಷಣೆಗೆ ಧಾವಿಸಿದರು. ಅಧಿಕಾರಿಗಳು ಅವರಿಗೆ ಕುಡಿಯಲು ನೀರು ನೀಡಿದರು. ಇದಾದ ನಂತರ ಚೇತರಿಸಿಕೊಂಡ ಅವರು ಸ್ವಲ್ಪ ಹೊತ್ತಿನಲ್ಲೇ ಗ್ರೂಪ್ ಫೋಟೋಗೆ ಸೇರಿಕೊಂಡರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries