ಪೆರ್ಲ: ಕಥೋಲಿಕ್ ಸಭಾ ಮಂಗಳೂರು ಪ್ರದೇಶ, ಉಕ್ಕಿನಡ್ಕ ಘಟಕ ಹಾಗೂ 21 ಆಯೋಗ ಇದರ ಸಹಯೋಗದಲ್ಲಿ ಮಾದಕ ವ್ಯಸನದ ವಿರುದ್ಧ ಅಭಿಯಾನ ಕಾರ್ಯಕ್ರಮ ಉಕ್ಕಿನಡ್ಕ ಇಗರ್ಜಿ ಸಭಾಂಗಣದಲ್ಲಿ ನಡೆಯಿತು. ಉಕ್ಕಿನಡ್ಕ ಇಗರ್ಜಿಯ ಧರ್ಮಗುರು ವಂದನೀಯ ಫಾದರ್ ಸುನಿಲ್ ಮಿರಾಂದ ಕಾರ್ಯಕ್ರಮ ಉದ್ಘಾಟಿಸಿದರು. ಅಬಕಾರಿ ಇಲಾಖೆಯ ನೀಲೇಶ್ವರ ರೇಂಜ್ ಪ್ರಿವೆಂಟಿವ್ ಆಫೀಸರ್ ಸುರೇಶ್ ಸಿ.ಕೆ.ವಿ ಹಾಗೂ ಬದಿಯಡ್ಕ ರೇಂಜ್ ಸಿವಿಲ್ ಎಕ್ಸಿಸ್ ಅಧಿಕಾರಿ ಜನಾರ್ಧನ ಎನ್ ಮಾಹಿತಿ ನೀಡಿದರು. ಸಂಧ್ಯಾ ಡಿ,ಸೋಜ ಸ್ವಾಗತಿಸಿ, ಪಾವ್ಲ್ ಡಿ,ಸೋಜ ವಂದಿಸಿದರು.