ಕಾಸರಗೋಡು: ಪಿಂಚಣಿ ಸಿಗದ ಮಾಜಿ ಸೈನಿಕರು, ಅವರ ವಿಧವೆಯರಿಗೂ, ವರ್ಷಕ್ಕೊಮ್ಮೆ ನೀಡುವ ಆರ್ಥಿಕ ಸಹಾಯಕ್ಕೆ ಜಿಲ್ಲಾ ಸೈನಿಕ ಕಲ್ಯಾಣ ಕಚೇರಿಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ವಾರ್ಷಿಕ ಆದಾಯವು 2,00,000 (ಎರಡು ಲಕ್ಷ) ರೂಪಾಯಿಗಳಿಗಿಂತ ಕಡಿಮೆಯಿರಬೇಕು. ಅರ್ಹರಾದವರು ಡಿಸ್ಚಾರ್ಜ್ ಸರ್ಟಿಫಿಕೇಟ್, ಮಾಜಿ ಸೈನಿಕರ/ವಿಧವೆಯ ಗುರುತಿನ ಚೀಟಿ ಮುಂತಾದವುಗಳ ದೃಢೀಕರಿಸಿದ ಪ್ರತಿಗಳು, ಗ್ರಮಾಧಿಕಾರಿ ಕಛೇರಿಯಿಂದ ಪಡೆಯುವ ಆದಾಯ ಸರ್ಟಿಫಿಕೇಟ್, ಜಿಲ್ಲಾ ಸೈನಿಕ ಕಲ್ಯಾಣ ಕಛೇರಿಯಿಂದ ಲಭಿಸುವ ಅರ್ಜಿ ನಮೂನೆ ಅನಸ್ಚರ್-ಬಿ (ಫಾರ್ಮ್ ಡಿ.ಡಿ. 40), ಐ.ಎಫ್.ಎಸ್.ಸಿ ಕೋಡ್ ಇರುವ ಬ್ಯಾಂಕ್ ಪಾಸ್ ಬುಕ್‍ನ ಮೊದಲ ಪುಟದ ನಕಲು ಸಹಿತ ಅಕ್ಟೋಬರ್ 31 ರಂದು ಜಿಲ್ಲಾ ಸೈನಿಕ ಕಲ್ಯಾಣ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕುಸ್ಚೀ ಬಗ್ಗೆ ಮಾಹಿತಿಗೆ ದೂರವಾಣಿ ಸಂಖ್ಯೆ(04994 256860)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.