ಕಾಸರಗೋಡು: ಜಿಲ್ಲೆಯಲ್ಲಿ ರೈಲು ಹಳಿಗಳ ಮೇಲೆ ಕಲ್ಲುಗಳನ್ನಿರಿಸಿ ವಿದ್ವಂಸಕತೆ ಸೃಷ್ಟಿ ನಡೆಸುತ್ತಿರುವ ಘಟನೆಗಳು ಮರುಕಳಿಸುತ್ತಿವೆ. ಒಂದು ತಿಂಗಳೊಳಗೆ ಜಿಲ್ಲೆಯಲ್ಲಿ ಇಂತಹ ನಾಲ್ಕು ಘಟನೆಗಳು ವರದಿಯಾಗಿವೆ.
ಮಕ್ಕಳು ಇದರ ಹಿಂದಿರುವುದರಿಂದ ಪೋಲೀಸರು ತೊಂದರೆಗೆ ಸಿಲುಕಿದ್ದು, ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಈ ಬಾರಿಯೂ ಪ್ರಕರಣ ದಾಖಲಿಸದೆ ಕೈ ಬಿಟ್ಟರೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೋಲೀಸರು ತಿಳಿಸಿದ್ದಾರೆ.
ಕಳೆದ ಮಂಗಳವಾರವೂ ಪಡನ್ನಕ್ಕಾಡ್ ರೈಲು ಹಳಿಯಿಂದ ಸಣ್ಣ ಜೆಲ್ಲಿ ಕಲ್ಲು ಪತ್ತೆಯಾಗಿತ್ತು. ಪೋಲೀಸರು ನಡೆಸಿದ ತನಿಖೆಯ ನಂತರ ಕೇವಲ ಏಳು ವರ್ಷದ ಇಬ್ಬರು ಮಕ್ಕಳು ಇದರ ಹಿಂದೆ ಇರುವುದು ಪತ್ತೆಯಾಗಿದೆ.
ರೈಲಿನ ಚಕ್ರಗಳ ಸದ್ದು, ಹೊಗೆ ನೋಡಿ ರೈಲ್ವೇ ಹಳಿ ಮೇಲೆ ಕಲ್ಲು ತಂದಿದ್ದೇವೆ ಎಂಬುದು ಮಕ್ಕಳು ನೀಡಿರುವ ಹೇಳಿಕೆ. ಚಿಕ್ಕ ಮಕ್ಕಳಾದ ಕಾರಣ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಪೋಲೀಸರು ಸ್ಪಷ್ಟಪಡಿಸಿದ್ದಾರೆ.
ಕಳೆದ ತಿಂಗಳು ನೆಲ್ಲಿಕುನ್ನು ಮತ್ತು ಕಳನಾಡು ರೈಲು ಹಳಿಗಳ ಮೇಲೆ ಪುಟ್ಟ ಮಕ್ಕಳು ಕಲ್ಲು ಎಸೆದಿದ್ದರು. ಅದೇ ರೀತಿ ಇಕ್ಬಾಲ್ ಗೇಟ್ ನಲ್ಲಿ ಹನ್ನೆರಡು ವರ್ಷದ ಮಕ್ಕಳು ಇದೇ ಕೃತ್ಯ ಎಸಗಿದ್ದಾರೆ. ಈ ಬಗ್ಗೆ ರೈಲ್ವೆ ಹಳಿಗಳ ಪಕ್ಕದ ಮನೆಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಪೆÇಲೀಸರು ತಿಳಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸಿದರೆ ಮಕ್ಕಳಂತೆ ಭಾವಿಸಲಾಗದು ಎಂದು ಪೋಲೀಸರು ಎಚ್ಚರಿಕೆ ನೀಡಿದ್ದಾರೆ.