ಬದಿಯಡ್ಕ: ಕಾಸರಗೋಡು ಜಿಲ್ಲಾ ಮಟ್ಟದ ಜೂನಿಯರ್ ಹಾಗೂ, ಮಿನಿ ಥ್ರೋ ಬಾಲ್ ಚಾಂಪಿಯನ್‍ಶಿಪ್ ಸೆಪ್ಟೆಂಬರ್ 10 ರಂದು ನೀರ್ಚಾಲು ಎಂ.ಎಸ್. ಸಿ. ಯಚ್. ಎಸ್ ಎಸ್ ಶಾಲೆಯಲ್ಲಿ ಜರಗಲಿದೆ. 01.01.2005 ನಂತರ ಜನಿಸಿದವರು ಜೂನಿಯರ್ ವಿಭಾಗದಲ್ಲೂ, 01.01.2011ನಂತರ ಜನಿಸಿದವರು ಮಿನಿ ವಿಭಾಗದಲ್ಲೂ ಭಾಗವಹಿಸಬಹುದಾಗಿದೆ. www.throwballkerala.com ಎಂಬ ವೆಬ್‍ಸೈಟ್‍ನಲ್ಲಿ ನೊಂದಾಯಿಸಬೇಕು. ಮಾಹಿತಿಗೆ 8123833264 ಸಂಖ್ಯೆಗೆ ಸಂಪರ್ಕಿಸಲು ತಿಳಿಸಲಾಗಿದೆ.