ಪೆರ್ಲ : ಕೆಥೋಲಿಕ್ ಸಭಾದ ನೇತೃತ್ವದಲ್ಲಿ ಮಣಿಯಂಪಾರೆ ಸಂತ ಲಾರೆನ್ಸ್ ಚರ್ಚಿನ ಪರಿಸರದಲ್ಲಿ ಓಣಂ ಉಡ್ಕಾಣ್ ಎಂಬ ವಿಶೇಷ ಕಾರ್ಯಕ್ರಮ ಭಾನುವಾರ ಜರಗಿತು.
ಚರ್ಚಿನ ಧರ್ಮಗುರು ಫಾ.ನೇಲ್ಸನ್ ಡಿ.ಅಲ್ಮೇಡ ಕಾರ್ಯಕ್ರಮ ಉದ್ಘಾಟಿಸಿದರು. ಚರ್ಚ್ ಪಾಲನ ಸಮಿತಿ ಅಧ್ಯಕ್ಷ ವಿಲ್ಸನ್ ಡಿಸೋಜ, ಕಾರ್ಯದರ್ಶಿ ಧನರಾಜ್, ಕೆಥೋಲಿಕ್ ಸಭಾ ವಲಯ ಅಧ್ಯಕ್ಷ ರಾಜು ಜೋನ್ ಡಿ.ಸೋಜ, ಮಣಿಯಂಪಾರೆ ಘಟಕಾಧ್ಯಕ್ಷ ಅಮೃತ್ ಲಾಲ್ ಡಿಸೋಜ, ಕೆಥೋಲಿಕ್ ಸಭಾದ ರೋಹನ್, ರಾಜು, ಕವಿತಾ, ಸೆವ್ರಿನ್, ಜೆಸಿಂತಾ, ಬಾಪಿಸ್ಟ್,ರೋಶನ್ ಎಣ್ಮಕಜೆ, ಕಿಶೋರ್, ಜೋರ್ಜ್ ಚಂಬ್ರಕಾನ, ಲಾರೆನ್ಸ್, ಡೇವಿಡ್ ಡಿಸೋಜ ಬೊಲ್ಕಿನಡ್ಕ ಮೊದಲಾದವರು ಭಾಗವಹಿಸಿದ್ದರು. ಬಳಿಕ ವಿವಿಧ ಮನರಂಜನೀಯ ಆಟೋಟ ಸ್ಪರ್ಧೆಗಳು ಮಧ್ಯಾಹ್ನ ಓಣಂ ಭೋಜನ ವಿತರಿಸಲಾಯಿತು. ಕೆಥೋಲಿಕ್ ಸಭಾ ಸದಸ್ಯರು ಸ್ಪರ್ಧೆಗಳಿಗೆ ನೇತೃತ್ವವಹಿಸಿದ್ದರು.