ಕಾಸರಗೋಡು: ರಾಷ್ಟ್ರೀಯ ವಿಶ್ವಕರ್ಮ ಫೆಡರೇಶನ್ (ಎನ್‍ವಿಎಫ್) ಜಿಲ್ಲಾ ಸಮಿತಿ ವತಿಯಿಂದ ವಿಶ್ವಕರ್ಮ ಜಯಂತಿ ದಿನಾಚರಣೆ ಹಾಗೂ ನೂತನ ಕಚೇರಿ ಉದ್ಘಾಟನೆ ಭಾನುವಾರ ನಡೆಯಿತು. ಎನ್‍ವಿಎಫ್ ಸಂಘಟನೆ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಸೀತಾರಾಮ ಆಚಾರ್ಯ ಉದ್ಘಾಟಿಸಿದರು.
ಜಿಲ್ಲಾಧ್ಯಕ್ಷ ಸಿ. ಕೆ. ಅಂಬಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಜಿ, ಕಾರ್ಯದರ್ಶಿ ರಾಘವನ್ ಕೊಳತ್ತೂರು ಮುಖ್ಯ ಭಾಷಣ ಮಾಡಿದರು. ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ರಾಘವನ್ ದೊಡ್ಡೂವಯಲ್, ರಾಜ್ಯ ಉಪಾಧ್ಯಕ್ಷ ಚಂದ್ರನ್ ಆರ್ಟಿಸ್ಟ್, ಮಹಿಳಾ ಸಮಿತಿಯ ರಾಜ್ಯಾಧ್ಯಕ್ಷೆ ವಸಂತಿ ಜೆ.ಆಚಾರ್ಯ, ರಾಜ್ಯ ಜಂಟಿ ಕಾರ್ಯದರ್ಶಿ ನಿಶಾ ವೆಳ್ಳರಿಕುಂಡು, ಉಪೇಂದ್ರನ್ ಆಚಾರ್ಯ ವಯಲಂಕುಯಿ, ವಾಮನ ಆಚಾರ್ಯ ಬೋವಿಕಾನ, ಪಿ. ಕೆ. ವಿಜಯನ್ ಉಪಸ್ಥಿತರಿದ್ದರು. ಎನ್‍ವಿಎಫ್ ಜಿಲ್ಲಾ ಕಾರ್ಯದರ್ಶಿ ಪುರುಷೋತ್ತಮನ್ ಆಚಾರ್ಯ ಸ್ವಾಗತಿಸಿದರು. ಜಿಲ್ಲಾ ಕೋಶಾಧಿಕಾರಿ ವಿಷ್ಣು ಆಚಾರ್ಯ ವಂದಿಸಿದರು.