ಮಧೂರು: ಯಕ್ಷಗಾನ ಪ್ರಿಯ ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಅಷ್ಟಮಿ ಉತ್ಸವದಂಗವಾಗಿ ಜರಗಿದ ಧಾರ್ಮಿಕ ಸಭೆಯನ್ನು ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯ ವಿಷ್ಣು ಆಸ್ರ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ದೇವಸ್ಥಾನದ ಆನುವಂಶಿಕ ಮೊಕ್ತೇಸರ ಕೆ.ಜಿ.ಶಾನುಭೋಗ್ ಅಧ್ಯಕ್ಷತೆ ವಹಿಸಿದ್ದರು. ಮಧೂರು ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ , ಖ್ಯಾತ ವೈದ್ಯ ಡಾ.ಜಯದೇವ ಕಂಗಿಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಈ ಸಂದಭರ್Àದಲ್ಲಿ ನೂರಾರು ಮಕ್ಕಳು ಮುದ್ದು ಕೃಷ್ಣ ರಾಧೆಯ ವೇಷದಲ್ಲಿ ಪಾಲ್ಗೊಂಡರು. ಸ್ಯಾಕ್ಷಫೆÇೀನ್ ವಾದನ, ವಿವಿಧ ತಂಡಗಳಿಂದ ಭಜನೆ, ನುರಿತ ಕಲಾವಿದರಿಂದ ಯಕ್ಷ-ಗಾನ ವೈಭವ ನಡೆಯಿತು. ಸಂಜೆ ಸಾಮೂಹಿಕ ಸತ್ಯನಾರಾಯಣ ಪೂಜೆ ಜರಗಿತು. ರಾತ್ರಿ ಚಂದ್ರೋದಯಕ್ಕೆ ಸರಿಯಾಗಿ ದೇವರಿಗೆ ಕ್ಷೀರಾಭಿಷೇಕ ನಡೆಯಿತು. ಕೆ.ವಿಷ್ಣು ಶ್ಯಾನುಭೋಗ್ ಸ್ವಾಗತಿಸಿ, ವೇಣುಗೋಪಾಲ ಮಾಸ್ತರ್ ವಂದಿಸಿದರು. ಕೆ.ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.