ಕಾಸರಗೋಡು : ಡಿಂಜ್ಯದಲ್ಲಿ ಖಜಾನೆ ನಿಯಂತ್ರಣವನ್ನು ವಿರೋಧಿಸಿ ಕೇರಳ ಸರ್ಕಾರಿ ಗುತ್ತಿಗೆದಾರರ ಯುವ ಘಟಕ ಏಕೋಪನ ಸಮಿತಿಯ ಕಾಸರಗೋಡು ಜಿಲ್ಲಾ ಸಮಿತಿಯಿಂದ ಜಿಲ್ಲಾ ಖಜಾನೆ ಎದುರು ಧರಣಿ ಹಮ್ಮಿಕೊಳ್ಳಲಾಯಿತು.
ಸರ್ಕಾರಿ ಗುತ್ತಿಗೆದಾರರು ಖಜಾನೆಗೆ ಬಿಲ್ ಸಲ್ಲಿಸಿದರೆ, ಖಜಾನೆ ನಿಯಂತ್ರಣದ ಹೆಸರಿನಲ್ಲಿ ಬಿಲ್ ಗುತ್ತಿಗೆದಾರಿಗೆ ವಾಪಸ್ ಮಾಡಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ 25 ಲಕ್ಷ ರೂ.ಬಿಲ್‍ಗಳನ್ನೂ ನಗದುಮಾಡಿಕೊಲ್ಳಲಾಗದ ಸ್ಥಿತಿ ಕೇರಳ ಸರ್ಕಾರದ ಖಜೇನೆಯಲ್ಲಿದೆ. ಪ್ರಸಕ್ತ ಈ ಮೊತ್ತ 5 ಲಕ್ಷ ರೂಪಾಯಿಗಿಂತ ಹೆಚ್ಚು ಸಿಗದ ಪರಸ್ಥಿತಿಯಿದೆ. ಇದರಿಂದ ಗುತ್ತಿಗೆ ವಲಯ ಭಾರಿ ಸಂಕಷ್ಟ ಅನುಭವಿಸುವಂತಾಗಿದೆ. ನಾನಾ ಇಲಾಖೆಗಳು ಕಾಮಗಾರಿಗೆ ಸಂಬಂಧಿಸಿ ಜಮಾ ಮಾಡಿರುವ ಮೊತ್ತವನ್ನೂ ನಗದೀಕರಿಸಲಾಗದೆ ತಡೆ ಹಿಡಿದಿರುವುದು ಖಂಡನೀಯ. ಖಜಾನೆ ನಿಯಂತ್ರಣ ತೆರವು ಮಾಡದಿದ್ದಲ್ಲಿ ಗುತ್ತಿಗೆದಾರರು ಪ್ರಬಲ ಹೋರಾಟಕ್ಕೆ ಮುಂದಾಗುವ ಅನಿವಾರ್ಯತೆ ಎದುರಾಗಲಿದೆ ಎಂದು ಪರತಿಭಟನಾಕಾರರು ಎಚ್ಚರಿಸಿದ್ದಾರೆ.
ಜಿಲ್ಲಾ ಖಜಾನೆ ಎದುರು ನಡೆಸಲಾದ ಧರಣಿಯನ್ನು ಯುವ ಘಟಕದ ಜಿಲ್ಲಾಧ್ಯಕ್ಷ ಸಿ.ಎಚ್.ಮೊಯ್ತೀನ್ ಚಾಪ್ಪಾಡಿ ಉದ್ಘಾಟಿಸಿದರು. ಜಾಸಿರ್ ಚೆಂಗಳ ಅಧ್ಯಕ್ಷತೆ ವಹಿಸಿದ್ದರು.
ಶರೀಫ್ ಬೋಸ್ ಮುಖ್ಯ ಭಾಷಣ ಮಾಡಿದರು, ಮಾರ್ಕ್ ಮುಹಮ್ಮದ್, ನಿಸಾರ್ ಕಲ್ಲಟ್ರ, ಮಜೀದ್ ಬೆಂಡಿಚಾಲ್, ಸುನೈಫ್ ಎಂ.ಎ.ಹೆಚ್, ಸಾಜಿದ್ ಬೆಂಡಿಚಾಲ್ ಮತ್ತು ಜುಬಿನ್ ಆಂಟನಿ ಉಪಸ್ಥಿತರಿದ್ದರು. ರಜಾಕ್ ಬೆದಿರ ಸ್ವಾಗತಿಸಿದರು. ಫೈಸಲ್ ಪೆÇವ್ವಲ್ ವಂದಿಸಿದರು.